ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ ದುನಿಯಾ ವಿಜಿ ‘ಸಲಗ’ ಸಾಂಗ್ !

ಬೆಂಗಳೂರು, ಜನವರಿ 06, 01, 2020 (www.justkannada.in): ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಸಲಗ ಚಿತ್ರದ ವಿಡಿಯೋ ಹಾಡು ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ.

ಮೋಹನ್ ಕೊರಿಯೋಗ್ರಫಿ ಮಾಡಿರುವ ಈ ಹಾಡಿನ ಮೇಕಿಂಗ್ ವಿಡಿಯೋ ಅಭಿಮಾನಿಗಳಿಗೆ ಮಜಾ ಕೊಡುವಂತಿದೆ. ಪೂರ್ತಿ ಡ್ಯಾನ್ಸಿನ ಸಮೇತ ಹೊರಬಂದಮೇಲೆ ಮತ್ತಷ್ಟು ಗಮನ ಸೆಳೆಯೋದು ಗ್ಯಾರಂಟಿ ಎನ್ನುತ್ತಿದ್ದಾರೆ ವಿಜಿ ಫ್ಯಾನ್ಸ್.

ಪಡ್ಡೆ ಹುಡುಗರ ಮೈ ಕುಣಿಸುವಂತಾ ಈ ಹಾಡು ಸಖತ್ ಕಲರ್ಫುಲ್ ಆಗಿ ಮೂಡಿಬಂದಿದೆ. ಟಗರು ಹಾಡಿನ ನಂತರ ಅಂಥೋಣಿ ದಾಸನ್ ಮತ್ತು ಚರಣ್ ರಾಜ್ ಕಾಂಬಿನೇಷನ್ನಿನ ಈ ಹಾಡು ಜನರನ್ನು ಹುಚ್ಚೆದ್ದು ಕುಣಿಸಲಿದೆ.