ಐಪಿಎಲ್ ನಡೆಸಲು ನಾವ್ ರೆಡಿ ಎಂದ ದುಬೈ ಕ್ರಿಕೆಟ್ ಮುಖ್ಯಸ್ಥ !

Promotion

ಬೆಂಗಳೂರು, ಜುಲೈ 18, 2020 (www.justkannnada.in): ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಮುಂದಾದರೆ ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಸಂಬಂಧ ದುಬೈ ಸ್ಪೋರ್ಟ್ಸ್ ಸಿಟಿಯ ಕ್ರಿಕೆಟ್ ಮತ್ತು ಈವೆಂಟ್‌ಗಳ ಮುಖ್ಯಸ್ಥ ಸಲ್ಮಾನ್ ಹನೀಫ್  ಮಾಹಿತಿ ನೀಡಿದ್ದಾರೆ.

ಐಪಿಎಲ್ ಗಾಗಿ ನಾವು ಎಲ್ಲಾ ಸೌಲಭ್ಯಗಳನ್ನು ಸಿದ್ಧಪಡಿಸುತ್ತಿದ್ದೇವೆ. ಅಕ್ಟೋಬರ್ 18ರಿಂದ ನವೆಂಬರ್ 15 ರ ನಡುವೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಬಗ್ಗೆ ಅನಿಶ್ಚಿತತೆ ಇರುವುದರಿಂದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಐಪಿಎಲ್ ಆಯೋಜಿಸಬಹುದು ಸಲ್ಮಾನ್ ಹನೀಫ್ ತಿಳಿಸಿದ್ದಾರೆ.