ಡ್ರಗ್ಸ್ ವಿಚಾರ: ಕನ್ನಡ ಚಿತ್ರರಂಗಕ್ಕೆ ಯಾರೂ ಮೇಟಿ ಇಲ್ಲದಿರುವುದೇ ಇಷ್ಟಕ್ಕೆಲ್ಲಾ ಕಾರಣ- ಸಂದೇಶ್ ನಾಗರಾಜ್ ಬೇಸರ…

ಮೈಸೂರು,ಸೆಪ್ಟಂಬರ್,4,2020(www.justkannada.in):  ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್  ನಂಟು ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಸಂದೇಶ್ ನಾಗರಾಜ್, ಕನ್ನಡ ಚಿತ್ರರಂಗಕ್ಕೆ ಯಾರೂ ಮೇಟಿ ಇಲ್ಲದಿರುವುದೇ ಇಷ್ಟಕ್ಕೆಲ್ಲಾ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್  ನಂಟು ಆರೋಪ  ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ನಿರ್ಮಾಪಕ ಸಂದೇಶ್ ನಾಗರಾಜ್ , ಕನ್ನಡ ಚಿತ್ರರಂಗಕ್ಕೆ ಮೇಟಿ ಇಲ್ಲದಿರುವುದೇ ಇಂತ ಸಮಸ್ಯೆಗೆ ಕಾರಣ.  ಡಾ.ರಾಜ್ , ವಿಷ್ಣು, ಅಂಬರೀಷ್ ಇದ್ದಾಗ ಇದ್ದಾಗ ಒಂದು ಭಯ ಇತ್ತು. ಅವರ ಮೇಲಿನ ಗೌರವಕ್ಕೆ ಹೆದರಿ ಯಾರು ದಾರಿ ತಪ್ಪಿರಲಿಲ್ಲ. ಈಗ ಕನ್ನಡ ಚಿತ್ರರಂಗ ಮೇಟಿ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈಗ ಶಿವರಾಜ್‍ ಕುಮಾರ್ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಅವರಿಗಾದರೂ ಎಲ್ಲರು ಗೌರವ ಕೊಟ್ಟು ಚಿತ್ರರಂಗದ ಹೆಸರು ಉಳಿಸಿ. ಶಿವರಾಜ್‍ಕುಮಾರ್ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗೋ ವಿಶ್ವಾಸ ಇದೆ ಎಂದು ಸಂದೇಶ್ ನಾಗರಾಜ್ ಹೇಳಿದರು.

ಡ್ರಗ್ಸ್ ತೆಗೆದುಕೊಳ್ಳುವವರ ಹೆಸರನ್ನು ನೇರವಾಗಿ ಹೇಳಲಿ…

ಡ್ರಗ್  ವಿಚಾರದಲ್ಲಿ ಇಡೀ ಚಿತ್ರರಂಗ ಎಂದು ಹೇಳುವುದು ಸರಿಯಲ್ಲ. ಡ್ರಗ್ಸ್ ತೆಗೆದುಕೊಳ್ಳುವವರ ಹೆಸರನ್ನು ನೇರವಾಗಿ ಹೇಳಲಿ. ಈ ಬಗ್ಗೆ ನಾನು ಇಂದ್ರಜಿತ್ ಕೇಳ್ತೇನೆ.  ನೇರವಾಗಿ ಹೆಸರು ಹೇಳಿಬಿಡಿ. ಅಲ್ಲಿಗೆ ಚಿತ್ರರಂಗದ ಮೇಲಿನ ಕಳಂಕ ತಪ್ಪಲಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ಹಿರೋ ಹಿರೋಯಿನ್ ಗಳು ಇದ್ದಾರೆ. ಅವರೆಲ್ಲ ಡ್ರಗ್ಸ್ ತೆಗೆದುಕೊಳ್ತಾರೆ ಅನ್ನೋದು ಸುಳ್ಳು. ಯಾರೋ 1% ಜನ ತೆಗೆಕೊಳ್ಳಬಹುದು. ಯಾರೋ ತೆಗೆದುಕೊಳ್ಳೊ ಬಗ್ಗೆ ಮಾಹಿತಿ ಇದ್ರೆ ನೇರವಾಗಿ ಅವರ ಬಗ್ಗೆ ಮಾಹಿತಿ ನೀಡಿಲಿ ಎಂದು ಸಂದೇಶ್ ನಾಗರಾಜ್ ಆಗ್ರಹಿಸಿದರು.

ನಾನು 30 ಚಿತ್ರ ನಿರ್ಮಾಣ ಮಾಡಿದ್ದೇನೆ. ನನಗೆ ಈ ಅನುಭವ ಆಗಿಲ್ಲ. ಇಂದ್ರಜಿತ್ ಅವರಿಗೆ ಮಾಹಿತಿ ಸಾಕ್ಷಿ ಇದ್ರೆ ಆರೋಪಿಗಳ ಹೆಸರು ಓಪನ್ ಆಗಿ ಹೇಳಿಲಿ. ಡ್ರಗ್ಸ್ ತೆಗೆದುಕೊಂಡರೆ ಅದು ಅವರ ವೈಯುಕ್ತಿಕ. ಚಿತ್ರರಂಗದವರೋಬ್ಬರೇ ಡ್ರಗ್ಸ್ ತೆಗೆದುಕೊಳ್ಳಲ್ಲ ಎಲ್ಲರು ತೆಗೆದು ಕೊಳ್ಳುತಾರೆ. ಯಾರೋ ಇಂತಹ ಕೆಲಸ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದು ಸಂದೇಶ್ ನಾಗರಾಜ್  ಹೇಳಿದರು.drugs-kannada-cinema-producer-sandesh-nagaraj-mysore

ನಾನು ಎರಡು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದೇನೆ

ಕೊರೋನಾ ಹಿನ್ನೆಲೆ ಸಿನಿಮಾಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಮಾರ್ಗಸೂಚಿ ಬಂದ ಮೇಲೆ ಸಿನಿಮಾ ನಿರ್ಮಾಣದ ಬಜೆಟ್ ಕಡಿಮೆ ಆಗಿದೆ. ಸಿನಿಮಾ ನಿರ್ಮಾಣಕ್ಕೆ ಮೊದಲಿನಷ್ಟು ಹಣ ವೆಚ್ಚವಾಗುತ್ತಿಲ್ಲ. ಕಡಿಮೆ ಬಜೆಟ್ ಸಿನಿಮಾ ಮಾಡುವುದಕ್ಕೆ ಈ ಮಾರ್ಗಸೂಚಿ ಬಹಳ ಉಪಯೋಗ ಆಗಿದೆ. ದೊಡ್ಡ ಹಿರೋಗಳ ಸಿನಿಮಾ ಮಾಡೋಕೆ ಮಾತ್ರ ಕಷ್ಟವಾಗುತ್ತೆ. ಈ ಹಿನ್ನಲೆಯಲ್ಲಿ ನಾನು ಎರಡು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದೇನೆ. ಎರಡು ಸಿನಿಮಾಗಳು ಮುಂದಿನ ವಾರದಿಂದ ಶೂಟಿಂಗ್ ಆರಂಭ ಆಗಲಿದೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದರು.

Key words: drugs-Kannada cinema- Producer- Sandesh Nagaraj-mysore