ಡ್ರಗ್ಸ್ ದಂಧೆ ವಿಚಾರ: ಜಿಲ್ಲೆಯ ಎಲ್ಲಾ ರೆಸಾರ್ಟ್ ಗಳಿಗೂ ನೋಟಿಸ್- ಮೈಸೂರು ಎಸ್ಪಿ ಸಿ.ಬಿ. ರಿಷ್ಯಂತ್…..

ಮೈಸೂರು, ಸೆಪ್ಟಂಬರ್,14,2020(www.justkannada.in):  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ರಾಜ್ಯವ್ಯಾಪಿ ವಿಸ್ತರಿಸಿರುವ ಹಿನ್ನೆಲೆ ಮೈಸೂರಿನಲ್ಲಿ ಪೊಲೀಸರು ಹೈ ಅಲರ್ಟ್ಆಗಿದ್ದು,  ಈ ಸಂಬಂಧ ಜಿಲ್ಲೆಯ ಎಲ್ಲಾ ರೆಸಾರ್ಟ್ ಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ.jk-logo-justkannada-logo

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಡ್ರಗ್ಸ್ ವಿಚಾರವಾಗಿ ಜಿಲ್ಲೆಯ ಎಲ್ಲಾ ರೆಸಾರ್ಟ್ ಗಳಿಗೂ ನೋಟಿಸ್ ನೀಡಲಾಗಿದೆ. ಕೇರಳ- ಕರ್ನಾಟಕ ಗಡಿಯ ಬಾವಲಿ ಚೆಕ್ ಪೋಸ್ಟ್ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ. ರೆಸಾರ್ಟ್ ಆವರಣದಲ್ಲಿ ಡ್ರಗ್ ಸಿಕ್ಕರೆ ರೆಸಾರ್ಟ್ ಮಾಲೀಕರೆ ಹೊಣೆ. ಅಪರಾಧಿಯಷ್ಟೇ ಮಾಲೀಕರನ್ನ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊರಗಡೆಯಿಂದ ರೆಸಾರ್ಟ್ ಗೆ ಬಂದು ಡ್ರಗ್ಸ್ ಸೇವನೆ‌ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಜಿಲ್ಲೆಯ ಎಲ್ಲಾ ರೆಸಾರ್ಟ್ ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ಕಬಿನಿ ಹಾಗೂ ಬೈಲುಕುಪ್ಪೆಯ ರೆಸಾರ್ಟ್ ಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇನ್ನು ಡ್ರಗ್ಸ್ ವಿಚಾರವಾಗಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ಇದರ ಜವಾಬ್ದಾರಿ ಹೊಂದಿರುತ್ತಾರೆ ಎಂದು ಎಸ್ ಪಿ ರಿಷ್ಯಂತ್ ತಿಳಿಸಿದ್ದಾರೆ.drugs-issue-notice-resorts-mysore-sp-c-b-rishyanth

ಅಂತರಾಜ್ಯ ಡ್ರಗ್ ಮಾರಾಟ ವಿಚಾರವಾಗಿ ಮಾಹಿತಿ ಇದೆ. ಅದನ್ನು ಸದ್ಯ ತನಿಖೆ ಹಂತದಲ್ಲಿರುವ ಕಾರಣ ಹೇಳಲು ಸಾಧ್ಯವಿಲ್ಲ. ಆಂಧ್ರದ ನಂಟಿರುವ ಒಂದು ಪ್ರಕರಣ ತನಿಖೆ ಹಂತದಲ್ಲಿದೆ‌ ಎಂದು ಎಸ್ ಪಿ ಸಿ.ಬಿ.ರಿಷ್ಯಂತ್ ಹೇಳಿದರು.

Key words: Drugs –issue-Notice – resorts-Mysore SP -C.B. Rishyanth