ಡ್ರಗ್ಸ್ ಕೇಸ್: ಬೆಳ್ಳಂಬೆಳಗ್ಗೆ  ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸರಿಂದ ದಾಳಿ.

ಬೆಂಗಳೂರು,ಆಗಸ್ಟ್,30,2021(www.justkannada.in):  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂಬೆಳಿಗ್ಗೆ ಸೆಲೆಬ್ರಿಟಿಗಳ ಮನೆಗಳ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

ಸೋನಿಯಾ ಅಗರವಾಲ್, ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.  ಉದ್ಯಮಿ ಭರತ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಗೋವಿಂದಪುರ ಠಾಣೆ ವ್ಯಾಪ್ತಿಯ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ. ರಾಜಾಜಿನಗರ, ಪದ್ಮನಾಭನಗರ, ಬೆನ್ಸನ್ ಟೌನ್ ಸೇರಿದಂತೆ ಹಲವೆಡೆ ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ENGLISH SUMMARY…

Drugs case: Early morning police raid on houses of celebrities
Bengaluru, August 30, 2021 (www.justkannada.in): Concerning the drugs case, the Bengaluru East police raided the houses of several celebrities in Bengaluru.
The houses of noted film actor Sonia Agarwal, D.J. Vachan Chinnappa, industrialist Bharat were raided by the police. According to sources, the police have taken industrialist Bharat into custody.
These raids were conducted concerning the drugs case in Govindapura Police Station limits. Raids were also held in Rajajinagar, Padmanabhanagar and Benson town.
Keywords: East Police/ Bengaluru/ raids/ celebrities/ drugs case

Key words: Drugs Case-Police- raid- celebrity’s- home