ದಸರಾ ಜಂಬೂಸವಾರಿಗೆ ಇಂದು ಚಾಲನೆ : ಮೈಸೂರಿಗೆ ಸಿಎಂ ಬಿ.ಎಸ್.ವೈ

kannada t-shirts

ಮೈಸೂರು,ಅಕ್ಟೋಬರ್,26,2020(www.justkannada.in) :  ನಾಡಹಬ್ಬ ದಸರಾ ಮಹೋತ್ಸವ ಜಂಬೂಸವಾರಿ ಚಾಲನೆ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೈಸೂರಿಗೆ ಆಗಲಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.jk-logo-justkannada-logo

ಮಧ್ಯಾಹ್ನ 12.20ಕ್ಕೆ ಹೆಲಿಕಾಪ್ಟರ್ ಮೂಲಕ ಲಲಿತ ಮಹಲ್ ಹೆಲಿಪ್ಯಾಡ್‍ಗೆ ಆಗಮಿಸಲಿದ್ದು, ಬಳಿಕ 12.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ.

3.40 ರಿಂದ 4.15 ರೊಳಗೆ ಚಾಮುಂಡೇಶ್ವರಿ ತಾಯಿ ವಿಗ್ರಹಕ್ಕೆ ಪುಷ್ಪಾರ್ಚನೆDrive-Dasara-Jambuswara-Arrival-CM BSY-Mysore

ಮಧ್ಯಾಹ್ನ 2.45ಕ್ಕೆ ಅರಮನೆ ಆವರಣಕ್ಕೆ ಆಗಮಿಸಿ, ಮಧ್ಯಾಹ್ನ 2.59 ರಿಂದ 3.20 ರೊಳಗೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 3.40 ರಿಂದ 4.15 ರೊಳಗೆ ಚಾಮುಂಡೇಶ್ವರಿ ತಾಯಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ 4.30 ಗಂಟೆಗೆ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಭುವನೇಶ್ವರಿ ದೇವಾಲಯದಲ್ಲಿ ಮಹಾರಾಜರಿಂದ ಬನ್ನಿಪೂಜೆ

ಅರಮನೆಯಲ್ಲಿ ಸರಳ ದಸರಾ ದಶಮಿ ಆಚರಣೆಗಳು‌ ಆರಂಭ. ಇಂದು ಉತ್ತರ ಪೂಜೆ ನೆರವೇರಿಸಿ ವಿಜಯಿ ಯಾತ್ರೆ ಹೊರಟ ಯದುವೀರ್. ಬೆಳಿಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆಬಾಗಿಲಿಗೆ ಆಗಮನವಾಗಿದೆ.

ಬೆಳಿಗ್ಗೆ 9.45ಕ್ಕೆ ಖಾಸ ಆಯುಧಗಳಿಗೆ ಉತ್ತರಪೂಜೆ. ನಂತರ ಆನೆಬಾಗಿಲಿಗೆ ಈ ಆಯುಧಗಳು ರವಾನೆ. ಬೆಳಿಗ್ಗೆ 10.20ರಿಂದ 10.40ರ ಖಾಸ ಆಯುಧಗಳನ್ನ ಬೆಳ್ಳಿ ರಥದಲ್ಲಿ ಭುವನೇಶ್ವರಿ ದೇವಾಲಯಕ್ಕೆ ರವಾನೆ ಮಾಡಲಾಗುವುದು.

ಕೊರೊನಾ ಕಾರಣಕ್ಕೆ ಈ ಬಾರಿ ವಜ್ರಮುಷ್ಠಿ ಕಾಳಗ ರದ್ದು

ಭುವನೇಶ್ವರಿ ದೇವಾಲಯದಲ್ಲಿ ಮಹಾರಾಜರಿಂದ ಬನ್ನಿಪೂಜೆ. ವಿಜಯಯಾತ್ರೆ ಮುಗಿದ ತಕ್ಷಣ ಚಾಮುಂಡೇಶ್ವರಿ ಅಮ್ಮವನವರನ್ನ ಕನ್ನಡಿ ತೊಟ್ಟಿಯಿಂದ ಚಾಮುಂಡಿತೊಟ್ಟಿಗೆ ರವಾನೆ. ಕೊರೊನಾ ಕಾರಣಕ್ಕೆ ಈ ಬಾರಿ ವಜ್ರಮುಷ್ಠಿ ಕಾಳಗ ರದ್ದು.

key words : Drive-Dasara-Jambuswara-Arrival-CM BSY-Mysore

website developers in mysore