ಡಾ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹ: ನಟ.ಶಿವರಾಜ್ ಕುಮಾರ್ ಗೆ ಪತ್ರ ಕಳಿಸುವ ಮೂಲಕ ಅಂಚೆ ಚಳುವಳಿ

ಮೈಸೂರು,ಅ,30,2019(www.justkannada.in): ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಡಾ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ಅಂಚೆ ಚಳುವಳಿ ನಡೆಸಲಾಯಿತು.

ಲಷ್ಕರಿ ಪೋಲಿಸ್ ಠಾಣೆ ಎದುರು ಇರುವ ಅಂಚೆ ಕಛೇರಿ ಮುಂದೆ ಅಂಚೆ ಪ್ರತಿಭಟನೆ ನಡೆಸಿ, ಸ್ಯಾಂಡಲ್ ವುಡ್  ನಟ.ಶಿವರಾಜ್ ಕುಮಾರ್ ಅವರಿಗೆ ಅಂಚೆ ಪತ್ರ ಕಳುಹಿಸಲಾಯಿತು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಹೋರಾಟ ಡಾ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕು. ಕರ್ನಾಟಕದಲ್ಲಿ ಮತ್ತೊಂದು ಗೋಕಾಕ್ ಚಳವಳಿ ರೀತಿಯಲ್ಲಿ ನಡೆಯಬೇಕು. ಆ ಹೋರಾಟದ ನೇತೃತ್ವವನ್ನು ನಟ ಶಿವರಾಜ್ ಕುಮಾರ್ ವಹಿಸಿಬೇಕು. ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೇ ಈ ಚಳವಳಿ ಅಗತ್ಯವಾಗಿದೆ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕನ್ನಡದ ಪ್ರಖ್ಯಾತ ನಟರುಗಳಾದ ಪುನೀತ್ ರಾಜ್‍ಕುಮಾರ್, ದರ್ಶನ್ ಯಶ್ ಗಣೇಶ, ಹಿರಿಯ ನಟರುಗಳಾದ ರವಿಚಂದ್ರನ್ ಉಪೇಂದ್ರ, ಚಲನಚಿತ್ರ ತಂಡದವರು ಬೆಂಬಲ ನೀಡಿ ಭಾಗವಹಿಸಬೇಕು. ಕನ್ನಡಕ್ಕಾಗಿ ಮತ್ತೊಂದು ಗೋಕಾಕ್ ಚಳುವಳಿ ನಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Key words: Dr Sarojini Mahishi report- implementation  -postcard – actor Shivraj Kumar- Protest -mysore