ಡಾ.ಎಸ್.ಎನ್.ಹೆಗಡೆ ಅವರ ‘’ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ 2’’ ಕೃತಿ ಬಿಡುಗಡೆ

ಮೈಸೂರು,ನವೆಂಬರ್,02,2020(www.justkannada.in) : ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರ 101ನೇ ಜನ್ಮ ದಿನಾಚರಣೆ ವರ್ಚುವಲ್ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಸ್.ಎನ್.ಹೆಗಡೆ ಅವರ ‘’ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ 2’’ ಕೃತಿಯನ್ನು ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಚ್.ಎ.ರಂಗನಾಥ್ ಬಿಡುಗಡೆ ಮಾಡಿದರು.jk-logo-justkannada-logoವಿಜ್ಞಾನ ಭವನದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕೃತಿ ಬಿಡುಗಡೆ ಮಾಡಿ ಮಾತನಾಡಿ, ಮೈಸೂರು ವಿವಿಯಲ್ಲಿ ಪ್ರಾಣಿಶಾಸ್ತ್ರ ಅಧ್ಯಯನ ಅರಂಭಕ್ಕೆ ಪ್ರಮುಖರಾದ, ವಿಜ್ಞಾನ ದಾಹ ಮೂಡಿಸಿ, ವಿಶಿಷ್ಟ ಪರಂಪರೆ ಬಿಟ್ಟು ಹೋದ ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ 2 ಕೃತಿಯು ಉತ್ತಮವಾಗಿದೆ ಎಂದರು.

ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರ ಬಗ್ಗೆ ಎಲ್ಲಿಯೂ ಲಿಖಿತ ದಾಖಲೆಯಿಲ್ಲ. ಈ ಪುಸ್ತಕದಲ್ಲಿ ಅವರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಪ್ರೊ.ಎಸ್.ಎನ್.ಹೆಗಡೆ ಅವರು ವಿಜ್ಞಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಕನ್ನಡದಲ್ಲಿ ಈ ರೀತಿಯ ಕೃತಿಗಳ ಅವಶ್ಯಕತೆ ಹೆಚ್ಚಿದೆ. ಬರೆವಣಿಗೆಯ ಮೂಲಕ ಅಪಾರ ಜನರನ್ನು ತಲುಪಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಹಿನ್ನೆಲೆಯುಳ್ಳ ಕೃತಿ ವಿರಳ

ಡಾ.ಕೆ.ಪಿ.ಲಲಿತಾ ಅವರು ಕೃತಿ ಕುರಿತು ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಹಿನ್ನೆಲೆಯುಳ್ಳ ಕೃತಿ ವಿರಳ. ವೈಜ್ಞಾನಿಕ ಹಿನ್ನೆಲೆಯಲ್ಲಿ ಅನೇಕ ಸಂಶೋಧನಾ ಲೇಖನ, ಕೃತಿಗಳನ್ನು ಹೆಗಡೆ ಅವರು ಒದಗಿಸಿರುವುದು ಸಂತೋಷದ ವಿಷಯ ಎಂದರು.
ವೈದ್ಯಕೀಯ ಹಿನ್ನೆಲೆಯ ಕೃತಿ ಕನ್ನಡದಲ್ಲಿ ರಚಿಸುವುದು, ಭಾಷಾಂತರಗೊಳಿಸುವುದು ದೊಡ್ಡ ಸವಾಲು. ಕೃತಿಯಲ್ಲಿ ವೈಜ್ಞಾನಿಕ ಕನ್ನಡ ಪದವನ್ನು ಸ್ಪಷ್ಟ, ನಿಚ್ಚಳವಾಗಿ ದಾಖಲಿಸಿದ್ದಾರೆ. ಪ್ರಾಮಾಣಿಕ ತೊಡಗುವಿಕೆ ಕೃತಿಯ ಉತ್ತಮವಾಗಿ ರೂಪುಗೊಳ್ಳುವುದಕ್ಕೆ ಪ್ರಮುಖ ಕಾರಣವಾಗಿದೆ. ಶ್ರೀಮಂತರು, ಬಡವರು ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ದೇಶಗಳ ನೊಬೆಲ್ ಸಾಧಕರನ್ನು ಈ ಕೃತಿಯಲ್ಲಿದ್ದಾರೆ ಎಂದು ಹೇಳಿದರು.

ಯುವವಿಜ್ಞಾನಿ, ಸಂಶೋಧಕರಿಗೆ ಎಲ್ಲ ರೀತಿ ಈ ಕೃತಿ ಸಹಕಾರಿಯಾಗಿದೆ

ಈ ಎಲ್ಲಾ ಸಾಧಕರು ಸಾಧನೆಗೆ ತೊಡಗಿಸಿಕೊಂಡ ರೀತಿ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತದೆ. ಯುವ ಸಂಶೋಧಕರು ಈ ಕೃತಿಯನ್ನು ಓದಿದರೆ ಸ್ಪೂರ್ತಿಯಾಗುತ್ತಾರೆ. ಸೇನೆ, ರಾಜಕೀಯ, ಕ್ರೀಡಾ, ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ ಸಾಧಕ ವಿಜ್ಞಾನಿಗಳು ಈ ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.
ಯುವವಿಜ್ಞಾನಿ, ಸಂಶೋಧಕರಿಗೆ ಎಲ್ಲ ರೀತಿ ಈ ಕೃತಿ ಸಹಕಾರಿಯಾಗಿದೆ. ಎಲ್ಲಾ ಗ್ರಂಥಾಲಯಗಳಲ್ಲಿರಬೇಕಾದ ಕೃತಿಯಾಗಿದೆ. ಎಲ್ಲ ಸಂಶೋಧಕರು, ವಿಜ್ಞಾನ ಆಸಕ್ತರು ಓದಲೇ ಬೇಕಾದಂತಹ ಕೃತಿಯಾಗಿದೆ ಎಂದು ತಿಳಿಸಿದರು.

ನನ್ನ ಸಾಧನೆಗೆ ಪರೋಕ್ಷವಾಗಿ ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರ ಸಹಕಾರ ಅಪಾರ

Dr.S.N.Hegde-Nobel-laureates-medical-field-Release-work

ಮೈಸೂರು ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಲೇಖಕ ಡಾ.ಎಸ್.ಎನ್.ಹೆಗಡೆ ಮಾತನಾಡಿ, ನನ್ನ ಸಾಧನೆಗೆ ಪರೋಕ್ಷವಾಗಿ ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರ ಸಹಕಾರ ಅಪಾರವಾಗಿದೆ. ಹೀಗಾಗಿ, ಈ ಕೃತಿಯನ್ನು ಅವರಿಗೆ ಅರ್ಪಿಸುತ್ತಿದ್ದೇನೆ ಎಂದರು.
ಗ್ರಾಮೀಣ ಪ್ರದೇಶದ, ಆರ್ಥಿಕತೆಯಲ್ಲಿ ಹಿಂದುಳಿದ ಕುಟುಂಬದಿಂದ ಬಂದ ನಾನು ಈ ಮಟ್ಟಕ್ಕೆ ಬೆಳೆದಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸುತ್ತದೆ. ಇದಕ್ಕೆ ನಾನು ಅನೇಕ ಸಾಧಕರ ಕೃತಿಯನ್ನು ಓದಿದ್ದು, ವಿದ್ಯಾಭ್ಯಾಸದಲ್ಲಿ ಹಂತ,ಹಂತವಾಗಿ ಉತ್ತಮವಾಗಿ ಬೆಳೆದಿದ್ದು ಕಾರಣವಾಗಿದೆ ಎಂದರು.

ಯಾರು ದಡ್ಡರಲ್ಲ. ಸಾಧಕರ ಕೃತಿ ಓದಿ, ಅವರ ಸೋಲುಗಳಿಂದ ಪಾಠಕಲಿಯಿರಿ

ಮುಂದಿನ ವರ್ಷ ಮೂರನೇ ಸಂಪುಟ ಬಿಡುಗಡೆಯಾಗಲಿದೆ. ಒಟ್ಟು 8 ಸಂಪುಟಗಳ ತರುವ ಕನಸಿದೆ. ಎಲ್ಲರಲ್ಲಿ ಪ್ರತಿಭೆಯಿದೆ. ಅದನ್ನು ಗುರುತಿಸಿಕೊಂಡು ಮುಂದೆ ಬನ್ನಿ. ಯಾರು ದಡ್ಡರಲ್ಲ. ಸಾಧಕರ ಕೃತಿ ಓದಿ, ಅವರ ಸೋಲುಗಳಿಂದ ಪಾಠಕಲಿಯಿರಿ. ಹಿಂಜರಿಕೆಯ ಗುಣವನ್ನು ಬಿಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮೈಸೂರು ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಆರ್.ರಮೇಶ್, ಪ್ರಾಧ್ಯಾಪಕಿ ಡಾ.ಲಲಿತಾ, ಮೈಸೂರು ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಸುತ್ತೂರು ಎಸ್.ಮಾಲಿನಿ, ಡಾ.ಬಸವರಾಜಪ್ಪ ಇತರರು ಭಾಗವಹಿಸಿದ್ದರು.

 

key words : Dr.S.N.Hegde-Nobel-laureates-medical-field-Release-work