ಡಾ.ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಕರುನಾಡ ಕಣ್ಮಣಿ’ ಪ್ರಶಸ್ತಿ ಪ್ರದಾನ…

ಮೈಸೂರು,ಏಪ್ರಿಲ್,23,2021(www.justkannada.in): ಡಾ॥ ರಾಜ್ ಕುಮಾರ್ ಸೇವಾ ಸಮಿತಿ ಸಂಘದ ವತಿಯಿಂದ ಇಂದು ಮೈಸೂರಿನಲ್ಲಿ ಡಾ॥ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.jk

ಪ್ರಶಸ್ತಿ ಪ್ರದಾನ ನೀಡಿ ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಆರ್. ರಘು (ಕೌಟಿಲ್ಯ) ಅವರು ಡಾ. ರಾಜ್ ಕುಮಾರ್ ರವರ ಬದುಕಿನ ಪ್ರತಿ ಘಳಿಗೆಯು ಇಂದಿನ ಪೀಳಿಗೆಗೆ ಅಮೂಲ್ಯ ಸಂದೇಶ ನೀಡುತ್ತದೆ ಸರಳತೆಯ ಸಾಕಾರ ಮೂರ್ತಿ ಡಾಕ್ಟರ್ ರಾಜ್ ಕುಮಾರ್ ಅವರು ಅಭಿನಯಿಸದ ಪಾತ್ರವಿಲ್ಲ, ಪ್ರತಿ ಪಾತ್ರವೂ ಸಾಮಾಜಿಕ ವ್ಯವಸ್ಥೆಯ ಉತ್ತಮ ಜೀವನಕ್ಕೆ ಇಂಬು ನೀಡುವಂತಿದ್ದವು,  ಹಾಗಾಗಿ ಈ ದಿನದ ಸುಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿರುವಂತಹ ಸಾಧಕರಿಗೆ ಡಾ.ರಾಜ್ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು  ಹೆಮ್ಮೆಯ ವಿಷಯ ಎಂದರು.

ರಾಜ್ಯದಲ್ಲಿ ಕರೋನ ಎರಡನೇ ಅಲೆ ಇಡೀ ರಾಜ್ಯವನ್ನು ಆತಂಕದಿಂದ ಆವರಿಸಿದೆ ನಾವುಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕಾರ್ಯಗಳನ್ನು ರಾಜ್ ರವರ ಅಭಿಮಾನದಿಂದ ಮಾಡಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರಲ್ಲೂ ಕರೋನಾ ಮುಂಜಾಗೃತೆಯ ಜಾಗೃತಿ ಮೂಡಿಸುವ ಕೆಲಸ ಮಾಡೋಣ. ಅಮೂಲ್ಯ ಸಂಬಂಧಗಳು ಕಳಚಿ ಹೋಗುತ್ತಿರುವ ಸರಪಳಿಯನ್ನು ತುಂಡರಿಸೋಣ ಎಂದು ಕರೆ ನೀಡಿದರು.dr-raj-kumars-birthday-karunada-kanmani-award-various-field-achievers-mysore

ಈ ಕಾರ್ಯಕ್ರಮದಲ್ಲಿ  ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್, ಸಮಾಜ ಸೇವಕರಾದ ಲಯನ್ ವೆಂಕಟೇಶ್ , ಡಾ. ರಾಜ್ ಕುಮಾರ್ ಸೇವಾ ಸಮಿತಿ ಸಂಘದ ಕಾರ್ಯಾಧ್ಯಕ್ಷರಾದ  ಸುಚೀಂದ್ರ ,ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಲೋಹಿತ್ ,ಮಧು ಎನ್ ಪೂಜಾರ್ ,ಹರೀಶ್ ನಾಯ್ಡು ,ಹಾಗೂ ಇನ್ನಿತರರು ಹಾಜರಿದ್ದರು.

Key words: Dr. Raj Kumar’s birthday- Karunada Kanmani award  – various field -achievers – mysore