2013ರಲ್ಲಿ ಗೆದ್ದಿದ್ದರೇ ರಾಜ್ಯದ ಸಿಎಂ ಆಗುವ ಅವಕಾಶವಿತ್ತು- ಅಂದಿನ ಸೋಲು ನೆನಪಿಸಿಕೊಂಡ ಡಾ.ಜಿ.ಪರಮೇಶ್ವರ್.

ತುಮಕೂರು,ಅಕ್ಟೋಬರ್,24,2022(www.justkannada.in):   ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ  ಹಾಗೂ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್  2013ರ ವಿಧಾನ ಸಭಾ ಚುನಾವಣೆಯಲ್ಲಿನ ಸೋಲನ್ನ ಮತ್ತೆ ನೆನಪಿಸಿಕೊಂಡಿದ್ದಾರೆ.

ಅಂದು ನಾನು ಗೆದ್ದಿದ್ದರೇ ರಾಜ್ಯದ ಸಿಎಂ ಆಗುವ ಅವಕಾಶವಿತ್ತು ಎಂದು ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.  ಈ ಬಗ್ಗೆ ಕೊರಟಗೆರೆಯ ತೋವಿನಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ತಾವು ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರದ ಜನರು ಎರಡು ಬಾರಿ ನನ್ನನ್ನ ಆಯ್ಕೆ ಮಾಡಿದ್ದಾರೆ.  ಆದರೆ ಒಳ್ಳೆಯ ಅವಕಾಶ ಇರುವಾಗ ನನ್ನನ್ನ ಸೋಲಿಸಿದರು. 2013ರಲ್ಲಿ ಗೆದ್ದಿದ್ದರೆ ರಾಜ್ಯದ ಸಿಎಂ ಆಗುವ ಅವಕಾಶವಿತ್ತು. ಬಹುಶಃ  ನನ್ನ ಹಣೆಬರಹದಲ್ಲಿ ಇರಲಿಲ್ಲ.  ಆದರೆ ಇವತ್ತು ನನ್ನ ಕೈಲಾದ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ತಮ್ಮನ್ನು ಎರಡು ಬಾರಿ ಗೆಲ್ಲಿಸಿರುವುದು ನಿಜವಾದರೂ ರಾಜ್ಯದ ಮುಖ್ಯಮಂತ್ರಿಯಾಗುವ  ಎಲ್ಲ ಅವಕಾಶಗಳಿದ್ದ 2013 ರಲ್ಲಿ ತಮ್ಮನ್ನು ಸೋಲಿಸಿಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.

Key words: Dr. G. Parameshwar – defeat – 2013 – chance – become – CM