ದೇಶದ್ರೋಹಿ ಹೇಳಿಕೆ ನೀಡುವವರಿಗೆ ಗುಂಡೇಟು: ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ ಎಂದು ವಾಗ್ದಾಳಿ ನಡೆಸಿದ ಬಸನಗೌಡ ಪಾಟೀಲ್ ಯತ್ನಾಳ್…

Promotion

ವಿಜಯಪುರ,ಫೆ,25,2020(www.justkannada.in):  ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ.  ಪಾಕಿಸ್ತಾನದ ಏಜೇಂಟ್  ರೀತಿ ಮಾತನಾಡುತ್ತಿದ್ದಾರೆ  ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ.  ಈ ಮುತ್ಯಾ ಎಲ್ಲಿದ್ದಾನೆ ಈಗ.  ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್ ರಂತೆ ಮಾತನಾಡಿದ್ದಾರೆ. ದೇಶಕ್ಕಾಗಿ ಎಲ್ಲರೂ ಹೋರಾಟ ಮಾಡಿದ್ದರೇ ಕೆಲವರು ನಕಲಿ ಸ್ವಾತಂತ್ರ ಹೋರಾಟಗಾರರಾಗಿದ್ದಾರೆ ಎಂದು ಟೀಕಿಸಿದರು.

ನೆಹರು  ಸ್ವಾರ್ಥದಿಂದ ಪಾಕ್ ಹುಟ್ಟಿತು. ನೆಹರು ಪ್ರಧಾನಿ ಮಾಡಲೆಂದೇ ಪಾಕ್ ಹುಟ್ಟಿತು.  ಸ್ವಾತಂತ್ರ ಹೋರಾಟದಲ್ಲಿ ಸಿದ್ದರಾಮಯ್ಯ ರಾಹುಲ್ ಸೋನಿಯಾ ಗಾಂಧಿ ಇದ್ರಾ ಎಂದು ಬಸನಗೌಡ ಪಾಟೀಲ್ ಯತ್ನಾಳ್  ಲೇವಡಿ ಮಾಡಿದರು.

ಪಾಕ್ ಪರ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಇನ್ಮುಂದೆ ದೇಶದ್ರೋಹಿ ಘೋಷಣೆ ಕೂಗುವವರನ್ನ ಜೈಲಿಗೆ ಕಳಿಸುವುದಿಲ್ಲ. ನೇರ ಜನ್ನತ್ ಗೆ ಕಳಿಸುತ್ತೇವೆ. ಇನ್ಮುಂದೆ ಹೀಗೆ ದೇಶದ್ರೋಹಿ ಘೋಷಣೆ ಕೂಗುವವರಿಗೆ ಗುಂಡೇಟು ಹೊಡೆಯಲಾಗುವುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

Key words: Doreswamy – fake- freedom fighter-vijaypur-bjp MLA- Basanagowda Patil Yatnal