‘ತಾಜ್ ಮಹಲ್’ ಸೊಬಗು ಕಣ್ತುಂಬಿಕೊಂಡ ‘ಡೊನಾಲ್ಡ್ ಟ್ರಂಪ್ ದಂಪತಿ: ಪ್ರೇಮಸೌಧದ ಬಗ್ಗೆ ಸಂದರ್ಶಕ ಪುಸ್ತಕದಲ್ಲಿ ಟ್ರಂಪ್ ಬರೆದಿದ್ದೇನು ಗೊತ್ತೆ…

ಆಗ್ರಾ,ಫೆ,24,2020(www.justkannada.in):  ಎರಡು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಗೆ ಪತ್ನಿ ಮೆಲಾನಿಯಾ ಜತೆ ಭೇಟಿ ನೀಡಿ ವೀಕ್ಷಿಸಿದರು.

ಡೊನಾಲ್ಡ್ ಟ್ರಂಪ್  ಅವರ ಜತೆ ಪುತ್ರಿ ಇವಾಂಕ  ಮತ್ತು ಅಳಿಯ ಸಹ ಆಗಮಿಸಿದ್ದು  ಅಹಮದಾಬಾದ್ ಬಳಿಕ ಆಗ್ರಾಗೆ ಭೇಟಿ ನೀಡಿದ್ದಾರೆ. ಪತ್ನಿ ಮೆಲಾನಿಯಾ ಅವರೊಂದಿಗೆ ಪ್ರೇಮಸೌಧಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಅಲ್ಲಿನ ಸೊಬಗನ್ನು ಕಣ್ತುಂಬಿಕೊಂಡು ಕೆಲಹೊತ್ತು ಅಲ್ಲಿಯೇ ಕಾಲ ಕಳೆದರು. ಹಾಗೆಯೇ ಪ್ರೇಮಸೌಧದಲ್ಲಿ ಟ್ರಂಪ್ ಹಾಗೂ ಮೆಲಾನಿಯಾ ಘೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಜತೆಗೆ ಪುತ್ರಿ ಇವಾಂಕಾ ಹಾಗೂ ಅಳಿಯ ಸಹ ಫೋಟೊಗೆ ಪೋಸ್ ಕೊಟ್ಟರು.

ಇನ್ನು ಡೊನಾಲ್ಡ್ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ತಾಜ್ ಮಹಲ್ ಬಗ್ಗೆ ತಮ್ಮ ಅಭಿಪ್ರಾಯವನ್ನ ಬರೆದಿದ್ದಾರೆ, ಭಾರತೀಯ ಸಂಸ್ಕೃತಿ ವೈವಿದ್ಯತೆಗೆ ಸಾಕ್ಷಿ. ತಾಜ್ ಮಹಲ್ ಸ್ಪೂರ್ತಿಯ ನೆಲೆ. ತಾಜ್​​​ ಮಹಲ್​​ ಭಾರತ ವೈವಿಧ್ಯತೆಯ ಅನಂತತೆಯ ಪ್ರತೀಕ’  ವರ್ಣಿಸಿದ್ದಾರೆ. ತಾಜ್ ಮಹಲ್ ಭೇಟಿ ಬಳಿಕ ಟ್ರಂಪ್ ದೆಹಲಿಗೆ ತೆರಳಲಿದ್ದಾರೆ.

Key words: Donald Trump -couple –visit-Taj Mahal