ವೈದ್ಯರ ದಿನವಾದ ಜು.01 ರಂದು ‘ ಮೈಸೂರು ಕರೋನಾ ಮುಕ್ತ’: ಪಣತೊಟ್ಟ ಡಿಸಿ ರೋಹಿಣಿ ಸಿಂಧೂರಿ.

ಮೈಸೂರು, ಮೇ28, 2021 : ಮೈಸೂರಿನಲ್ಲಿ ಇನ್ನೊಂದು ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತರುತ್ತೇವೆ. ಸಂಪೂರ್ಣವಾಗಿ ಕೊರೊನಾ ಮುಕ್ತ ಮಾಡುವ ಪಣ ಇದೆ. ನಿಂಯಂತ್ರಣಕ್ಕಂತೂ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.jk
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಇಂದು ಆಯೋಜಿಸಿದ್ದ ಪತ್ರಕರ್ತರಿಗೆ ವ್ಯಾಕ್ಸಿನ್ ಹಾಕುವ ಕಾರ್ಯಕ್ಕೆ ಚಾಲನೆ ನೀಡಿ, ಬಳಿಕ ಮಾಧ್ಯಮದ ಜತೆ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದಿಷ್ಟು…
ಪಾಸಿಟಿವ್ ಹೆಚ್ಚಿರುವುದಕ್ಕೆ ಆತಂಕ ಪಡಬೇಡಿ. ನಮ್ಮಲ್ಲಿ ಟೆಸ್ಟಿಂಗ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದೇವೆ‌. ಎಲ್ಲಾ ಅಂಕಿ ಅಂಶಗಳನ್ನು ವಾರ್ ರೂಮ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ಬೆಂಗಳೂರಿನ ನಂತರ ಮೈಸೂರಿನಲ್ಲೇ ಹೆಚ್ಚಿನ ಅಂಕಿ ಅಂಶಗಳನ್ನು ನೀಡುತ್ತಿದ್ದೇವೆ. ಜುಲೈ ಒಂದರ ವೈದ್ಯರ ದಿನದಂದು ವೈದ್ಯರ ಸೇವೆ ಸ್ಮರಿಸಿ ಕೊರೊನಾ ಮುಕ್ತ ಮೈಸೂರಿನ ಘೋಷಣೆ ಮೂಲಕ ಅವರಿಗೆ ಅರ್ಪಿಸೋಣ. ಇದು ನಮ್ಮ ಸಂಕಲ್ಪ.Mysuru DC instructs officials concerned to focus more on patients with comorbidities

ನಾಳೆಯ ಲಾಕ್ಡೌನ್ ಬಗ್ಗೆ ಯಾವುದೇ ಗೊಂದಲ ಬೇಡ. ಜನ ತೀರಾ ಅಗತ್ಯವಿದ್ದರೆ ಮಾತ್ರ ಹೊರಬನ್ನಿ. ಆದಷ್ಟು ಜನತಾ ಕರ್ಫ್ಯೂ ನಿಯಮವನ್ನು ಅಳವಡಿಸಿಕೊಳ್ಳಿ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆ.
ಮೈಸೂರಿನಲ್ಲಿ ಬ್ಲಾಕ್ ಫಂಗಸ್ ಕೇಸ್‌ಗಳು ಹೆಚ್ಚಾಗುತ್ತಿವೆ. ಅದರ ಚಿಕಿತ್ಸೆಗೂ ಔಷಧಿಗಳ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ 35 ಬ್ಲಾಕ್ ಫಂಗಸ್ ಕೇಸ್‌ಗಳು ಇವೆ. ಡಯಾಬಿಟೀಸ್ ಇರುವವರಲ್ಲಿ ಫಂಗಸ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ‘ ಕೋಮಾರ್ಬಿಡ್ ‘ ಕೇಸ್‌ಗಳ ಸರ್ವೆ ನಡೆಸಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 75 ಸಾವಿರ ಜನರಿಗೆ ಡಯಾಬಿಟಿಸ್ ಇದೆ. ಅವರಿಗೆ ಆದ್ಯತೆ ಮೇರೆಗೆ ನಿಗಾ ವಹಿಸಲಾಗಿದೆ. ಕೋವಿಡ್ ಚಿಕಿತ್ಸೆ ವಿಚಾರದಲ್ಲಿ ಮೊದಲಿನಿಂದಲೂ ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

key words: Doctors Day-covid free-mysore-DC-Rohini Sindhuri