ಡಿಕೆಶಿ-ಸಿದ್ಧರಾಮಯ್ಯ ಒಗ್ಗಟ್ಟಿನ ಮಂತ್ರ ಜಪಿಸಿದ ವಿಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್.

rations Distribution -Former CM –HD kumaraswamy- urges -government –biometric
Promotion

ಬೆಂಗಳೂರು,ಆಗಸ್ಟ್,4,2022(www.justkannada.in):  ನಿನ್ನೆ ದಾವಣಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರು ಕೈ ಮೇಲಕ್ಕೆತ್ತಿ ಒಗ್ಗಟ್ಟಿನ ಮಂತ್ರ ಜಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ,  ಆಗ ನನ್ನ ಕೈಯನ್ನು ಎತ್ತಿರಲಿಲ್ಲವೇ. ..? ಸಮ್ಮಿಶ್ರ ಸರ್ಕಾರದ ವೇಳೆ ನನ್ನ ಕೈ ಎತ್ತಿರಲಿಲ್ಲವೇ..?  ಕೈ ಎತ್ತೋದು ಇಳಿಸೋದು ನಡೆಯುತ್ತಿರುತ್ತದೆ. ಜನರನ್ನ ನಂಬಿಸಲು ಇಬ್ಬರೂ ಕೈ ಎತ್ತುತ್ತಾರೆ.  ಮುಂದಿನ ದಿನಗಳಲ್ಲಿ ಯಾರು ಯಾರ ಬೆನ್ನಿಗೆ ಚೂರಿ ಹಾಕ್ತಾರೆ ನೋಡೋಣ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಜಲಧಾರೆ ಕಾರ್ಯಕ್ರಮದಿಂದ ಉತ್ತಮ ಮಳೆಯಾಗುತ್ತಿದೆ.  20 ವರ್ಷಗಳ ನಂತರ ಎಲ್ಲಾ ಕೆರೆಗಳು ನದಿಗಳು ತುಂಬಿವೆ. ನಮ್ಮ ಪರಿಶುದ್ಧ ಕಾರ್ಯಕ್ರಮದಿಂಧ ಉತ್ತಮ ಮಳೆಯಾಗಿದೆ. ಕೆರೆಕಟ್ಟೆಗಳು ಒಡೆದು ಕೆಲವು ಕಡೆ ಸಮಸ್ಯೆಯಾಗಿದೆ. ಮಳೆಹಾನಿ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಹೆಚ್.ಡಿಕೆ ಹೇಳಿದರು.

Key words: DK Shivakumar-Siddaramaiah –unity- Former CM -HD Kumaraswamy