ಸಿಡಿ ಇಟ್ಟುಕೊಂಡು ಡಿಕೆ ಶಿವಕುಮಾರ್ ಬ್ಲಾಕ್ ಮೇಲ್ ಆರೋಪ: ರಮೇಶ್ ಜಾರಕಿಹೊಳಿಗೆ ಮಾಹಿತಿ ಇರಬೇಕು ಎಂದ ಶಾಸಕ ಸಿ.ಟಿ ರವಿ.

Promotion

ಬಾಗಲಕೋಟೆ,ಮಾರ್ಚ್,13,2023(www.justkannada.in): ಸಿಡಿ ಇಟ್ಟುಕೊಂಡು ಡಿಕೆ ಶಿವಕುಮಾರ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಸಚಿವರೊಬ್ಬರಿಗೆ ಕಾಂಗ್ರೆಸ್ ಗೆ ಬರದಿದ್ದರೇ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಬಾಗಲಕೋಟೆ ಬೀಳಗಿಯಲ್ಲಿ ಮಾತನಾಡಿದ  ಶಾಸಕ ಸಿ.ಟಿ ರವಿ, ಡಿ.ಕೆ ಶಿವಕುಮಾರ್ ಮತ್ತು ರಮೇಶ್  ಜಾರಕಿಹೊಳಿ ಒಂದೇ ಪಕ್ಷದಲ್ಲಿದ್ದವರು. ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತೆ ಎಂದು ರಮೇಶ್ ಗೆ ಗೊತ್ತಿರುತ್ತೆ. ರಮೇಶ್ ಜಾರಕಿಹೊಳಿಗೆ ಮಾಹಿತಿ ಇರಬೇಕು, ಆದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಇನ್ನು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಸಿ.ಟಿ ರವಿ, ಸಿದ್ಧರಾಮಯ್ಯ ಏನು ಹೇಳುತ್ತಾರೋ ಅದು ಆಗಲ್ಲ.  ಈ ಹಿಂದೆ ಬಿಎಸ್ ವೈ ಸಿಎಂ ಆಗಲ್ಲ ಅಂದರು. ಬಿಎಸ್ ವೈ ಸಿಎಂ ಆದರು.  ಮೋದಿ ಪ್ರಧಾನಿಯಾಗಲ್ಲ ಎಂದ್ರು. ಆದರೆ ಪ್ರಧಾನಿಯಾದರು. ಸಿದ್ಧರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ ಎಂದು ಕುಟುಕಿದರು.

ಅಲ್ಲಾಗೆ ಕಿವಿ ಕೇಳುವುದಿಲ್ಲವಾ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ  ಹೇಳಕೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ,  ಅಲ್ಲಾಗೆ ಕಿವಿ ಕೇಳುತ್ತೋ ಇಲ್ವಾ ಗೊತ್ತಿಲ್ಲ. ಆದರೆ ರಾಮನಿಗೆ ಮಾತ್ರ ಕಿವಿ ಕೇಳುತ್ತೆ  ಎಂದರು.

Key words: DK Shivakumar – blackmail – CD- MLA -CT Ravi – information –Ramesh jarakiholi