ಕೇಂದ್ರದಿಂದ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್ ಗೆ ಇಂಜೆಕ್ಷನ್ ಹಂಚಿಕೆ…

ನವದೆಹಲಿ,ಮೇ,22,2021(www.justkannada.in) ಕೊರೋನಾ ಭೀತಿ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಎಂಬ ರೋಗ ಜನರನ್ನ ಕಾಡಲು ಶುರುಮಾಡಿದ್ದು, ಈ ನಡುವೆ ಇದರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಇಂಜೆಕ್ಷನ್ ಹಂಚಿಕೆ ಮಾಡಿದೆ.jk

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, .ಕರ್ನಾಟಕಕ್ಕೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಆಂಪೊಟೆರಿಸಿನ್ ಬಿ 1270 ವಯಲ್ ಹಂಚಿಕೆ ಮಾಡಲಾಗಿದೆ. ಗುಜರಾತ್ ಗೆ 5,500, ಮಹಾರಾಷ್ಟಕ್ಕೆ 5090, ಆಂಧ್ರ ಪ್ರದೇಶಕ್ಕೆ 2310 ವಯಲ್ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.distribution-injection-black-fungus-center-state

ದೇಶಾದ್ಯಂತ 8840 ಬ್ಲಾಕ್ ಫಂಗಸ್ ಪತ್ತೆಯಾಗಿದ್ದು,  ಕರ್ನಾಟಕದಲ್ಲಿ 500 ಬ್ಲ್ಯಾಕ್ ಫಂಗಸ್ ಇದೆ.  ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ದೇಶದ ವಿವಿಧ ರಾಜ್ಯಗಳಿಗೆ 23,680 ವಯಲ್ ಗಳನ್ನ ಹಂಚಿಕೆ ಮಾಡಲಾಗಿದೆ ಎಂದು ಡಿ.ವಿ ಸದಾನಂದ ಗೌಡರು ಮಾಹಿತಿ ನೀಡಿದ್ದಾರೆ.

Key words: Distribution -injection – black fungus – center -state.