ಪ್ರಾಣಿ ದತ್ತು ಸ್ವೀಕರಿಸಿದವರಿಗೆ ನಟ ದರ್ಶನ್ ರಿಂದ ಪ್ರಶಂಸನಾ ಪತ್ರ ವಿತರಣೆ.

Promotion

ಮೈಸೂರು,ಆಗಸ್ಟ್,24,2021(www.justkannada.in): ಕೋವಿಡ್ ವೇಳೆ ಪ್ರಾಣಿ ದತ್ತು ಸ್ವೀಕಾರಕ್ಕೆ ನೀಡಿದ್ದ ಕರೆಗೆ ಓಗೊಟ್ಟು ಪ್ರಾಣಿ ದತ್ತು ಸ್ವೀಕಾರ ಮಾಡಿದವರಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪ್ರಶಂಸನಾ ಪತ್ರ ವಿತರಣೆ ಮಾಡಿದರು.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಕೋವಿಡ್ ವೇಳೆ ಪ್ರಾಣಿ ದತ್ತು ಸ್ವೀಕಾರ ಅಭಿಯಾನ  ನಡೆಸಿದ್ದರು. ದರ್ಶನ್ ಅಭಿಯಾನಕ್ಕೆ ಚಿತ್ರರಂಗದ ನಟ-ನಟಿಯರು ಕೈಜೋಡಿಸಿದ್ದರು.

ಇನ್ನು ಪ್ರಾಣಿ ದತ್ತು ಸ್ವೀಕಾರ ಮಾಡಿದ್ಧವರಿಗೆ ಇಂದು ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್ ಮಹಾದೇವಸ್ವಾಮಿ ನೇತೃತ್ವದಲ್ಲಿ  ನಟ ದರ್ಶನ್ ಪ್ರಶಂಸನಾ ಪತ್ರ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ  ಉದ್ಯಮಿ ಗಂಗರಾಜ್, ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಮೃಗಾಲಯ ಸಿಬ್ಬಂದಿ ರಾಜೇಗೌಡರು, ರಘು ಮತ್ತಿತರರು ಉಪಸ್ಥಿತರಿದ್ದರು.

Key words: Distribution -appreciation letter – actor Darshan -animal –adopters-mysore-ZOO