ಅತೃಪ್ತ ಶಾಸಕರಿಗೆ ಅನರ್ಹತೆ ತೂಗುಗತ್ತಿ..? ನಾಳೆ ಸ್ಪೀಕರ್ ಗೆ ದೂರು ನೀಡಲು ಕಾಂಗ್ರೆಸ್-ಜೆಡಿಎಸ್ ಚಿಂತನೆ..

ಬೆಂಗಳೂರು,ಜು,8,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಅನರ್ಹತೆ ತೂಗುಗತ್ತಿ ಎದುರಾಗುವ ಸಾಧ್ಯತೆ ಇದೆ. ಹೌದು, ಅತೃಪ್ತ ಶಾಸಕರ ವಿರುದ್ದ ಸ್ಪೀಕರ್ ಗೆ ದೂರು ನೀಡಲು ಕಾಂಗ್ರೆಸ್ ಜೆಡಿಎಸ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಪ್ರಜಾಪ್ರತಿನಿಧಿ ಕಾಯ್ದೆಯಡಿ ಅತೃಪ್ತ ಶಾಸಕರ ಅನರ್ಹತೆಗೊಳಿಸುವಂತೆ ದೂರು ನೀಡಲು ಕಾಂಗ್ರೆಸ್ –ಜೆಡಿಎಸ್ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.  ನಾಳೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆ ಮತ್ತು ಜೆಡಿಎಸ್ ಸಭೆಯ ನಂತರ ಸ್ಪೀಕರ್ ಗೆ ದೂರು ನೀಡಲು ನಿರ್ಧರಿಸಲಾಗಿದೆ.

ಈ ಪ್ರಕಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ವಜಾ ಆಗಲಿದ್ದಾರೆ. ಈ ದೂರಿನ ಅನ್ವಯ ರಾಜೀನಾಮೆ ನೀಡಿದ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಸ್ಪೀಕರ್ ವಜಾ ಮಾಡುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಹದಿನೆಂಟು ಶಾಸಕರನ್ನು ಅಲ್ಲಿನ ಸ್ಪೀಕರ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಯಾದರೂ ಕೋರ್ಟ್ ತಿರಸ್ಕರಿಸಿತ್ತು. ಈಗ ಆರು ವರ್ಷಗಳ ಕಾಲ ಸದರಿ ಶಾಸಕರು ಚುನಾವಣೆಗೆ ನಿಲ್ಲುವಂತಿಲ್ಲ. ಇದೇ ರೀತಿ ತಮಿಳುನಾಡು ಟೆಕ್ನಿಕ್ ಅನುಸರಿಸಲು ಉಭಯ ಪಕ್ಷಗಳ ವರಿಷ್ಟರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ನಮ್ಮ ಒಂದು ಕಣ್ಣು ಹೋದರೂ ಪರವಾಗಿಲ್ಲ.ಆದರೆ ರಾಜೀನಾಮೆ ನೀಡಿದವರ ರಾಜಕೀಯ ಭವಿಷ್ಯವನ್ನು ಅಂಧಕಾರಕ್ಕೆ ದೂಡೋಣ ಎಂದು ನಾಯಕರು ತೀರ್ಮಾನಿಸಿದ್ದಾರೆ.

Key words: DissatisfiedMLA- Congress-JDS- thinking – complain – Speaker