ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ‘ಅಧೀರ’ನ ಅಸಲಿತನದ ಚರ್ಚೆ

ಬೆಂಗಳೂರು, ಜುಲೈ 30, 2020 (www.justkannada.in): ಕೆಜಿಎಫ್ 2ನಲ್ಲಿ ಸಂಜಯ್ ದತ್ ಪೋಸ್ಟರ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಇದು ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪೋಸ್ಟರ್ ಸೇರಿದಂತೆ ಹಾಲಿವುಡ್ ಚಿತ್ರಗಳ ನಕಲು ಎಂದು ಕೆಲವರು ದೂರಿದ್ದಾರೆ. ಅಂದಹಾಗೆ ಸಂಜಯ್ ದತ್  ಹುಟ್ಟುಹಬ್ಬದ ಸಂಭ್ರಮದಲ್ಲೇ ಅಧೀರನ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್ ಮಾಡಲಾಗಿತ್ತು.

‘ವೈಕಿಂಗ್ಸ್‌’ ಕ್ರೂರ ಮಾರ್ಗದಿಂದ ಸ್ಫೂರ್ತಿ ಪಡೆದ ಅಧೀರ ಅಂತ ಬರೆದು ನಿರ್ದೇಶಕ ಪ್ರಶಾಂತ್​ ನೀಲ್​ ಅಧಿರ ಫಸ್ಟ್​ ಲುಕ್​ ಪೋಸ್ಟರ್​ ಶೇರ್​ ಮಾಡಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ವೈಕಿಂಗ್ಸ್​​​ ಪೋಸ್ಟರ್​ ಜೊತೆಗೆ ಅಧೀರ ಪೋಸ್ಟರ್​​ನ ಕಂಪೇರ್​ ಮಾಡಿ ಕಾಪಿ ಅಂತ ಹೇಳಿದ್ದಾರೆ.