ಸದನದಲ್ಲಿ ಕಬಡ್ಡಿ ಆಟದ ಬಗ್ಗೆ ಸ್ವಾರಸ್ಯಕರ ಚರ್ಚೆ: ಸಚಿವ ಆರ್.ಅಶೋಕ್ ಕಾಲೆಳೆದ ಸಿದ್ಧರಾಮಯ್ಯ..

ಬೆಂಗಳೂರು,ಸೆಪ್ಟಂಬರ್,13,2022(www.justkannada.in): ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯಲ್ಲಿ ಕಬಡ್ಡಿ ಆಟದ ಬಗ್ಗೆ ಸ್ವಾರಸ್ಯಕರ ಚರ್ಚೆಯಾಯಿತು.

ಸದನದಲ್ಲಿ ಅತಿವೃಷ್ಠಿ ಬಗ್ಗೆ  ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವ ವೇಳೆ ಕಂದಾಯ ಸಚಿವ ಆರ್.ಅಶೋಕ್ ಪದೇ ಪದೇ ಮಧ್ಯಪ್ರವೇಶ ಮಾಡುತ್ತಿದ್ಧರು. ಈ ವೇಳೆ ಯಾಕಪ್ಪಾ ಅಶೋಕ್, ಎದ್ದು‌ ನಿಂತು ವ್ಯಾಯಾಮ ಮಾಡ್ತಾ ಇದ್ದೀಯಾ ಸುಮ್ನೆ ಕುಂತ್ಕೋ ಎಂದು  ಸಿದ್ದರಾಮಯ್ಯ ಹೇಳಿದರು. ಇದಕ್ಕುತ್ತರಿಸಿದ ಸಚಿವ ಆರ್.ಅಶೋಕ್ ನಾನು ತುಂಬಾ ಸ್ಟ್ರಾಂಗ್ ಇದೀನಿ ಸರ್ ಎಂದರು.

ಹೌದಪ್ಪಾ, ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ ಎಂದು ಸಿದ್ಧರಾಮಯ್ಯ ಕಾಲೆಳೆದರು. ಹೌದು ಸಾರ್ 20 ವರ್ಷ ಕಬ್ಬಡಿ ಆಡಿದೆ ಎಂದು  ಸಚಿವ ಅಶೋಕ್ ಹೇಳಿದರು.  ಹೀಗೆ ಮಾತು ಮುಂದುವರೆಸಿದ ಸಿದ್ಧರಾಮಯ್ಯ ನಾನು ಹೈಸ್ಕೂಲ್ ನಲ್ಲಿ ಕಬಡ್ಡಿ ಆಡ್ತಿದ್ದೆ ಈಗ ಇಲ್ಲ. ಈಗ ಯಾವ ಆಟನೂ ಆಡೋದಕ್ಕೆ ಆಗ್ತಿಲ್ಲ ಎಂದರು. ಸಿದ್ಧರಾಮಯ್ಯ ಮಾತು ಕೇಳಿ ಇಡೀ ಸದನ ನಗೆಗಡಲಲ್ಲಿ ತೇಲಿತು.

ನಂತರ ಸಿದ್ದರಾಮಯ್ಯ ಭಾಷಣ ವೇಳೆ ಮಧ್ಯಪ್ರವೇಶ ಮಾಡಿದ ಕಂದಾಯ ಸಚಿವ ಅಶೋಕ್, ಬೇರೆ ರಾಜ್ಯಗಳಿಂದಲೂ ಮಾಹಿತಿ ತರಿಸಿದ್ದೇವೆ‌. ಬೇರೆ ರಾಜ್ಯಕ್ಕಿಂತಲೂ ಪರಿಹಾರ ಕೊಡುವುದರಲ್ಲಿ ನಾವು ಮುಂದೆ ಇದ್ದೇವೆ. ಎರಡು ದಿನಗಳಲ್ಲಿ ಪರಿಹಾರ ಕೊಡ್ತೀವಿ ಎಂದರು.

ಎರಡು ದಿನ ಅಂದ್ರಿ ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ  ಮಳೆ ಕಂಟಿನ್ಯೂ ಆಗಿ ಬರ್ತಿದೆ, ಸರ್ವೇ ಮಾಡಲು ಆಗ್ತಿಲ್ಲ .ಹಲವು ಬಾರಿ ಆರೇಳು ತಿಂಗಳು ಕಳೆದ್ರು ಪರಿಹಾರ ಕೊಟ್ಟಿರಲಿಲ್ಲ. ಒಂದು ವಾರದಲ್ಲಿ ಪರಿಹಾರ ಕೊಡ್ತೀವಿ ಎಂದು ಭರವಸೆ ನೀಡಿದರು.

NDRF ಪರಿಹಾರ ಪರಿಷ್ಕರಣೆ ಆಗಬೇಕು.

ಹೀಗಾಗಿ NDRF ಪರಿಹಾರ ಪರಿಷ್ಕರಣೆ ಆಗಬೇಕು. NDRF ಪರಿಹಾರ ಪರಿಷ್ಕರಣೆ 2015ರಲ್ಲಿ ಆಗಿದ್ದು.  ಆ ಬಳಿಕ ಯಾವುದೇ ಪರಿಷ್ಕರಣೆ ಆಗಿಲ್ಲ. 2020ರಲ್ಲಿ ಆಗಬೇಕಿತ್ತು ಆದ್ರೆ ಆಗಿಲ್ಲ.ಈಗ ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ವರದಿ ಕಳಿಸೋಣ. ಪರಿಷ್ಕರಣೆ ಆಗದಿರೋದ್ರಿಂದ ನಮ್ಮ ಪಾಲಿಗೆ ಕಷ್ಟ ಆಗ್ತಿದೆ. NDRF ನಾರ್ಮ್ಸ್ ಪ್ರಕಾರ ಕೇಂದ್ರ ಪರಿಹಾರ 75% ರಾಜ್ಯದ ಪಾಲು 25% ಆಗಿರಲಿದೆ. ಇದರ ಪರಿಷ್ಕರಣೆ ಮಾಡಿ ಹೆಚ್ಚು ಪರಿಹಾರ ಪಡೆಯಬೇಕಿದೆ. ಮಾತೆತ್ತಿದ್ರೆ ಮನಮೋಹನ್ ಸಿಂಗ್ ಇದ್ದಾಗಿಂತ, ಮೋದಿ ಕಾಲದಲ್ಲಿ ಹೆಚ್ಚು ಪರಿಹಾರ ಕೊಡಿಸಿದ್ದೀವಿ ಅಂತೀರಾ ಎಂದು ಸಿದ್ಧರಾಮಯ್ಯ ಟೀಕಿಸಿದರು.

Key words: discussion- about – Kabaddi-Minister -R. Ashok – Siddaramaiah