ಮೈಸೂರಿನ ಮೋರ್ ಸೂಪರ್ ಮಾರ್ಕೆಟ್‌ನಲ್ಲಿ ನಾಗಾ ವಿದ್ಯಾರ್ಥಿಗೆ ನೋ ಎಂಟ್ರಿ : ಸಿಬ್ಬಂದಿ ವಿರುದ್ಧ ಎಫ್.ಐ.ಆರ್.

 

ಮೈಸೂರು, ಮಾ.29, 2020 : (www.justkannada.in news ) ನಗರದ ಮೋರ್ ಸೂಪರ್ ಮಾರ್ಕೆಟ್‌ನಲ್ಲಿ ನಾರ್ತ್ ಈಸ್ಟ್ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿನ ಸಿಬ್ಬಂದಿ. ವಿರುದ್ಧ ದೂರು ದಾಖಲಿಸಿದ್ದಾರೆ.

ಮೈಸೂರಿನ ಚಾಮುಂಡಿಪುರಂ ವೃತ್ತದ ಬಳಿ ಇರುವ ಮೋರ್ ಸೂಪರ್ ಮಾರ್ಕೆಟ್ ನಲ್ಲೇ ಈ ಘಟನೆ ನಡೆದಿರುವುದು. ಇಂದು ಬೆಳಗ್ಗೆ ಮೋರ್ ಸೂಪರ್ ಮಾರುಕಟ್ಟೆಗೆ ಆಗಮಿಸಿ ನಾರ್ತ್ ಈಸ್ಟ್ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಯಿತು. ಆಗ ಅಲ್ಲಿನ ಸಿಬ್ಬಂದಿಗಳ ವರ್ತನೆಯನ್ನು ವಿದ್ಯಾರ್ಥಿಗಳು ಖಂಡಿಸಿದರು.

discrimination against Naga migrants -  "More" outlet-  Mysuru-  FIR- Manager and staff - to custody- Dr Chandragupta -Commissioner of Police -Mysuru city.

ನಮ್ಮನ್ನ ಯಾಕೇ ಒಳಗೆ ಬಿಡ್ತಿಲ್ಲ ಅಂತ ಪ್ರಶ್ನಿಸಿದರು. ನಮಗೂ ದಿನಸಿ ಬೇಕು, ನಮಗೂ ಆಹಾರ ಪದಾರ್ಥ ಬೇಕು. ನಾವು ನಿಮ್ಮ ಹಾಗೇ ಮನುಷ್ಯರು.ನಾವು ಭಾರತೀಯರೇ. ನಮ್ಮ ಬಳಿಯೂ ಆಧಾರ್ ಕಾರ್ಡ್ ಇದೆ. ನಮ್ಮನ್ನ ಯಾಕೇ ಬೇರೆಯವರಂತೆ ನೋಡ್ತಿರಾ.? ನಾವು ನಿಮ್ಮ ರೀತಿಯಲ್ಲೆ ಬದುಕುತ್ತಿದ್ದೇವೆ. ನಮಗೂ ಬದುಕಲು ಆಹಾರ ಪದಾರ್ಥ ನೀಡಿ ಎಂದು ಒತ್ತಾಯಿಸಿದರು.

ಮೋರ್ ಬಾಗಿಲ ಬಳಿ ನಡೆದ ಈ ಘಟನೆ ಮೊಬೈಲ್‌ನಲ್ಲಿ ಸೆರೆಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿತ್ತು.  ಈ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಕಾರ್ಯ ಪ್ರವೃತ್ತರಾದರು.

ಆಯುಕ್ತರ ಸ್ಪಷ್ಟನೆ :

ನಾಗಾ ವಲಸಿಗರ ವಿರುದ್ಧ ತಾರತಮ್ಯವನ್ನು ತೋರಿಸುವ ವೀಡಿಯೊ ಮೈಸೂರಿನಲ್ಲಿ ಕಂಡುಬಂದಿದೆ. ತಕ್ಷಣ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮತ್ತು ಮೋರ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜನರು ಮತ್ತು ಅಂಗಡಿ ಮಾಲೀಕರು / ಸಿಬ್ಬಂದಿಗಳು ಇಂತಹ ಕೃತ್ಯಗಳನ್ನು ಮಾಡದಂತೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾವು ಕೋರುತ್ತೇವೆ ಎಂದು ಟ್ವೀಟರ್ ಮೂಲಕ ಡಾ.ಚಂದ್ರಗುಪ್ತ ಸ್ಪಷ್ಟನೆ ನೀಡಿದ್ದಾರೆ.

key words :  discrimination against Naga migrants –  “More” outlet-  Mysuru-  FIR- Manager and staff – to custody- Dr Chandragupta -Commissioner of Police -Mysuru city.

 

english summary :

A video showing discrimination against Naga migrants in a “More” outlet was noticed in Mysuru and immediately FIR has been lodged in Krishnaraja police station and the Manager and staff of the outlet have been taken to custody. We urge people and shop owners/staff to desist from doing such acts and behave responsibly in this time of crisis.

Dr Chandragupta
Commissioner of Police
Mysuru city.