ಕೊರೊನಾ ಸೋಂಕಿನ ವಿರುದ್ಧ ಗೆದ್ದ ರಾಜಮೌಳಿ ಹಾಗೂ ಕುಟುಂಬ

ಬೆಂಗಳೂರು, ಆಗಸ್ಟ್ 12, 2020 (www.justkannada.in): ನಿರ್ದೇಶಕ ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈ ಕುರಿತು ರಾಜಮೌಳಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.  2 ವಾರಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ. ವರದಿ ಕೂಡ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಜುಲೈ 29ರಂದು ರಾಜಮೌಳಿ ಮತ್ತು ಅವರ ಕುಟುಂಬದವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆದಕಾರಣ ಎಲ್ಲರನ್ನೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿರಿಸಲಾಗಿತ್ತು.