ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಮ್ ಬ್ಯಾಕ್: ಆರ್’ಸಿಬಿಗೆ ಧನ್ಯವಾದ ಹೇಳಿದ ದಿನೇಶ್ ಕಾರ್ತಿಕ್

ಬೆಂಗಳೂರು, ಮೇ 24, 2022 (www.justkannada.in): ಬರೋಬ್ಬರಿ ಮೂರು ವರ್ಷಗಳ ನಂತರ ದಿನೇಶ್ ಕಾರ್ತಿಕ್​ಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದ್ದು, ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಜೂನ್ 9 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಭಾನುವಾರ ಪ್ರಕಟಿಸಿದ್ದು, ಇದರಲ್ಲಿ ದಿನೇಶ್ ಕಾರ್ತಿಕ್ ಕೂಡ ಆಯ್ಕೆಯಾಗಿದ್ದರು.

ಆರ್​ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕಾರ್ತಿಕ್, ಇದು ನನ್ನ ಅತ್ಯಂತ ವಿಶೇಷವಾದ ಕಮ್​ಬ್ಯಾಕ್ ಆಗಿದೆ ಎಂದು ಹೇಳಿದ್ದಾರೆ.

ನಾನು ಸತತವಾಗಿ ಅಭ್ಯಾಸ ನಡೆಸಿದ್ದೆ. ನಾನು ಮಾಡಲು ಬಯಸಿದ ಪಾತ್ರವನ್ನು ನಿರ್ವಹಿಸಲು ಅವರು ನನಗೆ ಮತ್ತೊಂದು ಅವಕಾಶ ನೀಡಿದ್ದಾರೆಂದು ಭಾವಿಸುತ್ತೇನೆ ಎಂದಿದ್ದಾರೆ ದಿನೇಶ್.