ಡಿಗ್ನಿಟಿ ಫಾರ್ ಇಂಡಿಯಾ, ಯೂನಿಟಿ ಫಾರ್ ಇಂಡಿಯಾ: ನಮ್ಮ ಸಂವಿಧಾನ ನವ ಭಾರತ ನಿರ್ಮಾಣಕ್ಕೆ ಮಾದರಿ- ಪ್ರಧಾನಿ ಮೋದಿ ಶ್ಲಾಘನೆ…

ನವದೆಹಲಿ,26,2019(www.justkannada.in):  ನಮ್ಮ ಸಂವಿಧಾನ ಜಗತ್ತಿನಲ್ಲೇದೊಡ್ಡ ಸಂವಿಧಾನವಾಗಿದೆ. ನವ ಭಾರತ ನಿರ್ಮಾಣಕ್ಕೆ ನಮ್ಮ ಸಂವಿಧಾನ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದರು.

ಇಂದು ಸಂವಿಧಾನ ದಿನ, ಸಂವಿಧಾನದ 70ನೇ ವರ್ಷಾಚರಣೆ ಹಿನ್ನೆಲೆ ಸಂಸತ್ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಇಂದು ಐತಿಹಾಸಕ ದಿನವಾಗಿದೆ. ನಮ್ಮ ಸಂವಿಧಾನ ಜನರಿಗೆ ದಾರಿದೀಪವಾಗಿದೆ. ನಮ್ಮ ಜನರ ಕನಸು ನನಸಾಗಿಸಲು ಸಮಾನ ಅಧಿಕಾರ ಸಿಗುವಂತಾಗಲು ಸಂವಿಧಾನ ಸಹಕಾರಿ. ಇಂತಹ ಸಂವಿಧಾನ  ಮಹಾನ್ ನಾಯಕರ ಶ್ರಮದಿಂದ ರಚಿತವಾಗಿದೆ. ಸಂವಿಧಾನ ರಚಿಸಿದ ಮಹಾನ್ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ನಮ್ಮದು ಜಾತ್ಯಾತೀತ ಸಂವಿಧಾನ.  ಡಿಗ್ನಿಟಿ ಫಾರ್ ಇಂಡಿಯಾ, ಯೂನಿಟಿ ಫಾರ್ ಇಂಡಿಯಾ ಈ ಎರಡು ಹೇಳಿಕೆಗಳ ಮೂಲಕ ನಮ್ಮ ಭಾರತ ಅಖಂಡವಾಗಿರಲಿದೆ.  ಏಕ್ ಭಾರತ್ ಶ್ರೇಷ್ಟ ಭಾರತ್ ಮೂಲಕ ಮುನ್ನಡೆಯಾಗಲಿದೆ. ಇದಕ್ಕೆ ಸಂವಿಧಾನ ಕಾರಣ. ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಶ್ರದ್ಧೆ ಕಳೆದುಕೊಂಡಿಲ್ಲ.  ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳಿಸಿದ್ದೇವೆ ಎಂದು ನುಡಿದರು.

ಹಾಗೆಯೇ ಇಂದು ಮುಂಬೈ ಉಗ್ರರ ದಾಳಿಯಾದ ದಿನ. ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Dignity for India- Unity for India- Constitution – model – construction – Prime Minister -Modi