ವಿಳಂಬ ತಪ್ಪಿಸಲು ಡಿಜಿಲಾಕರ್ ಪರಿಹಾರ- ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ.

ಮೈಸೂರು,ನವೆಂಬರ್,10,2022(www.justkannada.in):  ನಾನಾ ಸಂಸ್ಥೆ, ವಿವಿಗಳು ಹಾಗೂ ಸರಕಾರದ ಮಟ್ಟದಿಂದ ಆಗುವ ಅನೇಕ ವಿಳಂಬಗಳಿಗೆ ಡಿಜಿಲಾಕರ್ ಪರಿಹಾರ ಒದಗಿಸಬಲ್ಲದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್ ಶಿವಪ್ಪ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಡಿಜಿಲಾಕರ್ – ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಡ್) ವತಿಯಿಂದ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೋ ಸರ್ಟಿಫಿಕೇಟ್ ಅಥವಾ ಇನ್ಯಾವುದೋ ಪ್ರಮಾಣ ಪತ್ರ ವಿದ್ಯಾರ್ಥಿಗಳಿಗೆ ಬೇಕಿರುತ್ತದೆ. ಕೆಲಸಕ್ಕೆ ಸೇರಲು ನಿಗದಿತ ಸಮಯಕ್ಕೆ ಸಲ್ಲಿಸಬೇಕಾಗಿರುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಅದು ಸಿಗುವುದಿಲ್ಲ. ಡಿಜಿಲಾಕರ್ ಮೂಲಕ ಸುಲಭವಾಗಿ ವಿದ್ಯಾರ್ಥಿಗಳು ತಮಗೆ ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ತಂತ್ರಜ್ಞಾನಕ್ಕೆ ನಾವು ಧನ್ಯವಾದಗಳನ್ನು ತಿಳಿಸಬೇಕು ಎಂದರು.

ಇಂದು ಇ ಗರ್ವನೆಸ್, ಇ – ಗವರ್ನರ್ ಮೂಲಕ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಾನಾ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ಹೋಗಬೇಕು ಎಂದು ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದನ್ನು ನಾವು ಸ್ಮರಿಸಬಹುದು. ಹಾಗಾಗಿ ಯಾವುದೇ ಪಾಲಿಸಿಯನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ವಿಳಂಬ ಇಲ್ಲದೆ ಪಾರದರ್ಶಕವಾಗಿ ಜನರಿಗೆ ಅನುಕೂಲ ಆಗುವ ಕೆಲಸ ಮಾಡಬೇಕು ಎಂದರು‌.

ಇಂದು ಡಿಜಿಲಾಕರ್ ಜನರಿಗೆ ಸುಲಭವಾಗಿ ಲಭಿಸುತ್ತದೆ. ಬಹಳ ಸುರಕ್ಷಿತವಾಗಿ ದಾಖಲೆಗಳನ್ನು ಸಂಗ್ರಹಿಸಿ ಲಾಕರ್ ನಲ್ಲಿ ಇಡಬಹುದು. ಭದ್ರತೆ ಇರುತ್ತದೆ. ಈ ಸಂಗ್ರಹದಲ್ಲಿ ರಾಜ್ಯದಲ್ಲೇ ಮೈಸೂರು ವಿವಿ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ತಲುಪಲು ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು. ಈಗಾಗಲೇ 12 ಲಕ್ಷ ದಾಖಲೆ ಅಪ್ಲೋಡ್ ಮಾಡಲಾಗಿದೆ. ಪಿಜಿಯ 3 ಲಕ್ಷ ಹಾಗೂ ಯುಜಿಯ 9 ಲಕ್ಷ ಅಪ್ಲೋಡ್ ಆಗಿದೆ. ವಿವಿ ಜನರ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ನೀಡಲು ಸದಾ ಸಿದ್ಧವಿದೆ. ಬದಲಾದ ಕಾಲಘಟ್ಟಕ್ಕೆ ನಾವೆಲ್ಲರೂ ತೊಡಗಿಸಿಕೊಂಡು‌ ಕೆಲಸ ಮಾಡೋಣ ಎಂದರು.

ನ್ಯಾಡ್ ಪ್ರಾಜೆಕ್ಟ್ ಡೈರೆಕ್ಟರ್  ಶ್ರೀವ್ಯಾಸ ಎಚ್.ಎಂ., ಮಾತನಾಡಿ, ಕರ್ನಾಟಕ ಸರಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಗರ್ವನರ್ಸ್ ನಲ್ಲೂ ಹೊಸ ಸಾಧನೆ ಮಾಡಲಾಗಿದೆ. ಗೂಗಲ್ ಡ್ರೈವ್ ರೀತಿ ಡಿಜಿಟಲ್ ಲಾಕರ್ ಭದ್ರತೆ ಒದಗಿಸುತ್ತದೆ. ಕರ್ನಾಟಕ ಸರಕಾರದ ಎಲ್ಲಾ ಇಲಾಖೆಗಳಿಗೆ ಲಾಕರ್ ರಕ್ಷಣೆ ಒದಗಿಸುತ್ತದೆ. ಈಗಾಗಲೇ 30 ಕೋಟಿ ದಾಖಲೆಗಳನ್ನು ಸಂರಕ್ಷಣೆ ಮಾಡಲಾಗಿದೆ.

ಡಿಜಿಟಲ್ ಇಂಡಿಯಾಗೂ ಇದು ಪೂರಕವಾಗಿ ಕೆಲಸ ಮಾಡುತ್ತದೆ. ರೈತ ವಿದ್ಯಾನಿಧಿಗೆ ಎಷ್ಟೋ ಜನರು ಅರ್ಜಿ ಹಾಕಿಲ್ಲ. ಆದರೂ ಅವರಿಗೆ ಹಣ ಸೇರಿತು. ಇದಕ್ಕೆ ಕಾರಣ ಡಿಜಿಲಾಕರ್. ಕರ್ನಾಟಕ ಬಿಟ್ಟು ಬೇರೆ ಯಾವ ರಾಜ್ಯದಲ್ಲೂ ಇದು ಇಲ್ಲ. ನಮ್ಮ‌ಬಳಿ 80 ಲಕ್ಷ ರೈತರ ಡಾಟಾದಿಂದ ಇದು ಸಾಧ್ಯವಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸಿಡಿಸಿ ನಿರ್ದೇಶಕ ಪ್ರೊ. ಲೋಕನಾಥ್, ಪ್ರಾಜೆಕ್ಟ್ ಮ್ಯಾನೇಜರ್ ಪಿ.ಎನ್. ಕಾರ್ತಿಕ್, ಪ್ರೊ. ರಮೇಶ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: Digilocker -solution – avoid delay- Mysore University – Prof. R. Shivappa

ENGLISH SUMMARY…

Digilocker solution to prevent delay: UoM Registrar Prof. R. Shivappa
Mysuru, November 10, 2022 (www.justkannada.in): “The Digilocker can provide solution to the delays that happen from various institutions, universities and at the government level,” opined Prof. R. Shivappa, Registrar, University of Mysore.
He participated in the one-day training program on ‘Digilocker-National Academic Depository (NAD)’ held at the Vignana Bhavana, in the Manasa Gangotri campus. “Students may require some certificate at some point of time. They will have to submit them on time during recruitments. But, usually nobody will have easy access for it. The Digilocker will provide proper solution to such problems. The students can easily access all their documents. For that reason we have to thank the technology,” he said.
“Today several facilities are being provided through E-Governance, E-Governor. Former Chief Minister Ramakrishna Hegde had implemented several programs when he was in power in order to ensure that the benefits of the various government programs reaches to the doorstep of the beneficiaries. Hence, first we have to understand any policy. Any work should be beneficial for the people and reach them without delay, transparently.”
“Today the Digilocker is easily accessible to everyone. All the important documents can be stored in it. It is very safe. The University of Mysore is in the 3rd place in its usage. The University will give all cooperation to jump to the first place. Already 12 lakh documents have been uploaded, including 3 lakh UG and 9 lakh UG documents. Our University is always ready to provide facilities as required to the people. Let us all adopt to the changing times and work accordingly,” he observed
Prof. G. Hemanth Kumar, Vice-Chancellor, University of Mysore, CDC Director Prof. Loknath, Project Manager P.N. Kartik, Prof. Ramesh Kumar and others were present.
Keywords: University of Mysore/ Digilocker/ Training program