ಚಿರು ಜೊತೆ ‘ಫಸ್ಟ್ ಡೇ, ಫಸ್ಟ್ ಶೋ’ ನೆನೆದು ಭಾವುಕರಾದ ಧ್ರುವ ಸರ್ಜಾ

Promotion

ಬೆಂಗಳೂರು, ಜನವರಿ 21, 2021 (www.justkannada.in):

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ.

ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾಹಿತಿ ನೀಡುತ್ತಿದ್ದ ವೇಳೆ ಧ್ರುವ ಭಾವುಕರಾದರು.

ಸಿನಿಮಾದ ಎಡಿಟಿಂಗ್ ಸಮಯದಲ್ಲಿ ಅಣ್ಣ ಸಿನಿಮಾ ನೋಡಿದ್ದ, ಹಾಗೆ ಮಾಡು ಹೀಗೆ ಮಾಡು ಎಂದು ಚಿರು ಹೇಳಿರುವುದನ್ನು ಧ್ರುವ ಸ್ಮರಿಸಿದರು.

‘ಫಸ್ಟ್ ಡೇ ಫಸ್ಟ್ ಶೋ ಯಾವಾಗಲು ನಾನು ಅವನ ಜೊತೆ ನೋಡುತ್ತಿದೆ. ಆದರೀಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಮ್ಮ ನೋವು ವ್ಯಕ್ತಪಡಿಸಿದರು.