ನಿವೃತ್ತಿ ನಂತರದ ಪ್ಲಾನ್ ಬಿಚ್ಚಿಟ್ಟ ಕೂಲ್ ಕ್ಯಾಪ್ಟನ್ ಧೋನಿ !

Promotion

ರಾಂಚಿ, ಮೇ 21, 2019 (www.justkannada.in): ಧೋನಿ ವಿಶ್ವಕಪ್ ನಂತರ ನಿವೃತ್ತಿ ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಯಾವಾಗ ನಿವೃತ್ತಿ ಪಡೆಯುತ್ತೇನೆ ಎಂಬುದನ್ನು ಅವರು ಖಚಿತಪಡಿಸಿಲ್ಲ. ಆದರೆ ನಿವೃತ್ತಿ ನಂತ್ರ ಏನು ಮಾಡ್ತೇನೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧೋನಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಧೋನಿ ಕೆಲ ಪೇಟಿಂಗ್ ಗಳನ್ನು ತೋರಿಸಿದ್ದಾರೆ.

ಬಾಲ್ಯದಿಂದಲೂ ಧೋನಿಗೆ ಪೇಟಿಂಗ್ ನಲ್ಲಿ ಆಸಕ್ತಿಯಿತ್ತು. ಬಿಡುವು ಸಿಕ್ಕಾಗ ಕೆಲ ಪೇಟಿಂಗ್ ಮಾಡಿದ್ದಾನೆ. ನಿಮಗೆ ನಾನು ಬಿಡಿಸಿದ ಚಿತ್ರಗಳು ಇಷ್ಟವಾಗುತ್ತೆ ಎಂದುಕೊಂಡಿದ್ದೇನೆ. ನಿವೃತ್ತಿ ನಂತ್ರ ಸಿಕ್ಕ ಸಮಯದಲ್ಲಿ ಪೇಟಿಂಗ್ ಹವ್ಯಾಸ ಮುಂದುವರೆಸುತ್ತೇನೆಂದು ಧೋನಿ ಹೇಳಿದ್ದಾರೆ.