ಲೇಡಿ ಸೂಪರ್ ಸ್ಟಾರ್ ನಯನತಾರಾ ಸಿನಿಮಾಗೆ ಧೋನಿ ಪ್ರೊಡ್ಯೂಷರ್ !

Promotion

ಬೆಂಗಳೂರು, ಮೇ 12, 2022 (www.justkannada.in): ಕ್ರಿಕೆಟಿಗ ಎಂಎಸ್ ಧೋನಿ ಇದೀಗ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಡಲು ಮುಂದಾಗಿದ್ದಾರೆ

ಹೌದು. ಬದಲಿಗೆ ನಿರ್ಮಾಪಕನಾಗಿ. ಎಂಎಸ್ ಧೋನಿ, ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರ ನೆರವಿನೊಂದಿಗೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ತಮಿಳುನಾಡಿನಲ್ಲಿ ಧೋನಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಧೋನಿಯನ್ನು ತಲಾ ಎಂದೇ ಕರೆಯುತ್ತಾರೆ. ಇನ್ನು ಕೆಲವು ಸೀಸನ್‌ಗಳ ಐಪಿಎಲ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಧೋನಿ ವಿದಾಯ ಹೇಳಲಿದ್ದಾರೆ. ಆದರೆ ಸಿನಿಮಾ ಮೂಲಕ ತಮಿಳುನಾಡಿನೊಂದಿಗೆ ನಂಟು ಮುಂದುವರೆಸುವ ಇರಾದೆ ಧೋನಿಗಿದೆ.

ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧವಾಗಿದ್ದು, ಮುಖ್ಯ ಪಾತ್ರಧಾರಿಯೂ ಫಿಕ್ಸ್ ಆಗಿದ್ದಾಗಿದೆ. ಸಿನಿಮಾ ನಿರ್ಮಾಣಕ್ಕೆಂದು ಸಂಜಯ್ ಎಂಬುವರನ್ನು ಮ್ಯಾನೇಜರ್ ಮಾದರಿಯಲ್ಲಿ ಧೋನಿ ನೇಮಿಸಿಕೊಂಡಿದ್ದಾರೆ. ಈ ಸಂಜಯ್ ರಜನೀಕಾಂತ್‌ರ ಆಪ್ತ ಸಹ. ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಲಿದ್ದಾರೆ.