ಬಿಡುಗಡೆಗೂ ಮುನ್ನವೇ ಭರ್ಜರಿ ಆದಾಯ ದೋಚುತ್ತಿರುವ ದೇವರಕೊಂಡ ನಟನೆಯ ‘ಲೈಗರ್’ !

ಬೆಂಗಳೂರು, ಜುಲೈ 28, 2022 (www.justkannada.in): ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೋಡಿಯಾಗಿ ನಟನೆಯ ‘ಲೈಗರ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಬಿಸಿನೆಸ್ ಮಾಡಿದೆ.

ಹೌದು. ನಟ ವಿಜಯ್​ ದೇವರಕೊಂಡ ಅವರು ಲೈಗರ್ ಮೂಲಕ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್​ 25ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ಇದಕ್ಕೂ ಮುನ್ನವೇ ಸಾಕಷ್ಟು ಗಳಿಕೆ ಕಂಡಿದೆ.

ರಿಲೀಸ್​ ಆಗೋದಕ್ಕಿಂತ ಮೊದಲೇ ಈ ಚಿತ್ರ 180 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

‘ಲೈಗರ್​’ ಸಿನಿಮಾ ಬರುತ್ತಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ಈಗಾಗಲೇ ಹಿಂದಿ ಹೊರತುಪಡಿಸಿ ಉಳಿದೆಲ್ಲ ಭಾಷೆಗಳ ವಿತರಣೆ ಹಕ್ಕುಗಳು ಬರೋಬ್ಬರಿ 80 ಕೋಟಿ ರೂಪಾಯಿಗೆ ಸೇಲ್​ ಆಗಿದೆ ಎನ್ನಲಾಗಿದೆ.

ಉತ್ತರ ಭಾರತದ ಮಂದಿ ‘ಲೈಗರ್​’ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಹಿಂದಿ ವರ್ಷನ್​ಗೆ ಭಾರಿ ಬೇಡಿಕೆ ಬಂದಿದೆ.