ಜಿಲ್ಲಾಧಿಕಾರಿ ಶಿಖಾ ನಿಂದನೆ ಪ್ರಕರಣ : ವಿಶೇಷ ಸರ್ಕಾರಿ ಅಭಿಯೋಜಕರಾಗಿ ಜಿ.ವಿ ರಾಮಮೂರ್ತಿ ಹಾಗೂ ಆರ್. ಗಿರಿಜೇಶ್ ನೇಮಕ.

kannada t-shirts

 

ಮೈಸೂರು, ಜೂ.14, 2019 (www.justkannada.in news ) : ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಹಿರಿಯ ವಕೀಲರಾದ ಜಿ.ವಿ ರಾಮಮೂರ್ತಿ ಹಾಗೂ ಆರ್. ಗಿರಿಜೇಶ್ ಅವರನ್ನು ನೇಮಕ ಮಾಡಲಾಗಿದೆ.

ಏನಿದು ಘಟನೆ :

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸರಕಾರಿ ಅತಿಥಿ ಗೃಹಕ್ಕೆ ಆಗಮಿಸಿದ್ದರು. ಈ ವೇಳೆ ಶಿಖಾ ಅವರನ್ನು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಘಟನೆ 2016 ರಲ್ಲಿ ನಡೆದಿತ್ತು.

ಈ ಘಟನೆ ಸಂಬಂಧ ಡಿಸಿಯಾಗಿದ್ದ ಶಿಖಾ ಅವರು, ಮರೀಗೌಡ, ಮಂಜುನಾಥ್ ಇನ್ನಿತರರ ವಿರುದ್ಧ ನಜರ್‌ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕ ಕೆಲ ತಿಂಗಳುಗಳ ವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮರೀಗೌಡ. ನಂತರ ಪೊಲೀಸರಿಗೆ ಶರಣು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆನಂತರ ಜಾಮೀನಿನ ಮೇಲೆ ಬಿಡುಗಡೆ. ಇದೀಗ ಈ ಪ್ರಕರಣದ ವಿಚಾರಣೆಗೆ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕಗೊಳಿಸಿರುವುದು ಪ್ರಕರಣದ ವಿಚಾರಣೆಗೆ ಮತ್ತಷ್ಟು ಚುರುಕು ಮೂಡಿಸಿದಂತಾಗಿದೆ.

ಆಗಸ್ಟ್ 13ಕ್ಕೆ ಮತ್ತೆ ವಿಚಾರಣೆ.

ಪೊಲೀಸರು ಅಮಾನತು ಮಾಡಿರುವ ಸಿಸಿ ಕ್ಯಾಮೆರಾ ವಿಶ್ಯುಯಲ್ ಹಾಗೂ ಇತರ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮೈಸೂರಿನ 3ನೇ ಕಿರಿಯ ಶ್ರೇಣಿ ನ್ಯಾಯಾಲಯ ಸೂಚಿಸಿದೆ. ಈ ಸಂಬಂಧ ಆ. 13ಕ್ಕೆ ವಿಚಾರಣೆ ನಡೆಯಲಿದೆ.

key words : mysore -court-dc-shika-marigowda-pp

Deputy Commissioner Shikha Abuse Case: senior advocates GK Ramamurthy and R girijesh are oppointed as Special public Prosecutors

website developers in mysore