‘ ಮಣಿ ಮಹಿಮೆ ” : ಬಜೆಟ್ ನಲ್ಲಿ “ಜನಸ್ನೇಹಿ ಸಹಾಯ ವೇದಿಕೆ” ಯೋಜನೆಗೆ 5 ಕೋಟಿ ರೂ, ಡಿವಿಜಿ ಹೆಸರಲ್ಲಿ ಡಿಜಿಟಲ್ ಮೀಡಿಯಾಗೂ ಒತ್ತು.

 

ಬೆಂಗಳೂರು, ಮಾ.05, 2020 : (www.justkannada.in news ) : ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಜನಸ್ನೇಹಿ ಸಹಾಯ ವೇದಿಕೆ” ಯೋಜನೆಗೆ ಈ ಸಾಲಿನ ಬಜೆಟ್ ನಲ್ಲಿ 5 ಕೋಟಿ ರೂ.ಗಳ ಅನುದಾನ ನಿಗಧಿಪಡಿಸಲಾಗಿದೆ.

ಮಾಹಿತಿ ಮತ್ತು ಸಂಪರ್ಕ ಇಲಾಖೆಯ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಕ್ಯಾ.ಪಿ.ಮಣಿವಣ್ಣನ್ ಅವರ ದೂರದೃಷ್ಠಿಯ ಫಲವಾಗಿ ಕೆಲ ಸಮಯದ ಹಿಂದೆ “ಜನಸ್ನೇಹಿ ಸಹಾಯ ವೇದಿಕೆ” ಯೋಜನೆ ಜಾರಿಗೆ ಬಂದಿತ್ತು. ಇದೀಗ ಈ ಯೋಜನೆಗೆ ರಾಜ್ಯ ಸರಕಾರ ಬಜೆಟ್ ನಲ್ಲಿ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಿದೆ.

“ಜನಸ್ನೇಹಿ ಸಹಾಯ ವೇದಿಕೆ” ಯೋಜನೆ ಮೂಲಕ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಈ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರಕಾರ ಉದ್ದೇಶಿಸಿದ್ದು, ಈ ಸಲುವಾಗಿ ಐದು ಕೋಟಿ ರೂ. ಗಳ ಅನುದಾನವನ್ನು ಈ ಸಾಲಿನ ಬಜೆಟ್ ನಲ್ಲಿ ಘೋಷಿಸಿದೆ.

Department of Information and Public Relations-“Janasnehi Sahaya Vedike”-Digital Media Advertisement Policy-Manivananan

ಡಿಜಿಟಲ್ ಮಾಧ್ಯಮಕ್ಕೂ ಒತ್ತು :

ಹೊಸ ಮಾಧ್ಯಮಗಳ ಮೂಲಕ ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಲು ಡಿಜಿಟಲ್ ಮೀಡಿಯಾ ಜಾಹೀರಾತು ನೀತಿ ರೂಪಿಸಲು ಸರಕಾರ ಮುಂದಾಗಿದೆ. ಈ ಉದ್ದೇಶಕ್ಕಾಗಿ ಖ್ಯಾತ ಬರಹಗಾರ, ಹಿರಿಯ ಪತ್ರಕರ್ತರು ಆಗಿದ್ದ ಡಿ.ವಿ ಗುಂಡಪ್ಪ ಅವರ ಹೆಸರಿನಲ್ಲಿ ನಿಧಿ ಸ್ಥಾಫಿಸುವ ಬಗೆಗೆ ಬಜಟ್ ನಲ್ಲಿ ಆಶ್ವಾಸನೆ ನೀಡಲಾಗಿದೆ.

KEY WORDS : Department of Information and Public Relations-“Janasnehi Sahaya Vedike”-Digital Media Advertisement Policy-Manivananan

BUDGET REPORT :

Department of Information and Public Relations, working as a bridge between the Government and the general public, has put in place “Janasnehi Sahaya Vedike” scheme. By establishing co-ordination with various departments, it is proposed to implement this scheme more effectively. For this a grant of Rs.Five crore will be provided.
A Digital Media Advertisement Policy will be formulated to reach government programmes to the public effectively through new media. A fund for this purpose will be established in the name of renowned writer Dr. D.V. Gundappa, who was a senior journalist.