ಸಿಎಂ ಬಿಎಸ್ ವೈಗೆ ಭೂ ಕಂಟಕ; ಕೋರ್ಟ್ ನಲ್ಲಿಂದು ಡಬಲ್ ಹಿನ್ನೆಡೆ. 25 ಸಾವಿರ ರೂ. ದಂಡ…….

ಬೆಂಗಳೂರು,ಜನವರಿ,5,2021(www.justkannada.in): ದೇವರಬೀಸನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ನಂತರ ಸಿಎಂ ಬಿಎಸ್  ಯಡಿಯೂರಪ್ಪಗೆ ಮತ್ತೆರಡು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಕಂಟಕ ಎದುರಾಗಿದೆ. ಆಲಂ ಪಾಷಾ ಸಲ್ಲಿಸಿದ್ದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಬಿಎಸ್ ವೈ ವಿರುದ್ದ ತನಿಖೆ ಮುಂದುವರಿಕೆಗೆ ಹೈಕೋರ್ಟ್ ಆದೇಶಿಸಿದೆ. ಜೈಕುಮಾರ್ ಹಿರೇಮಠ್ ಸಲ್ಲಿಸಿದ್ದ ಗಂಗೇನಹಳ್ಳಿ ಪ್ರಕರಣದಲ್ಲಿ 25 ಸಾವಿರ ದಂಡ ವಿಧಿಸಿದೆ.jk-logo-justkannada-mysore

ಡಿನೋಟಿಫಿಕೇಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಎಫ್‍ಐಆರ್ ರದ್ದುಪಡಿಸಬೇಕೆಂದು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಗಂಗೇನಹಳ್ಳಿಯಲ್ಲಿ 1.11 ಎಕರೆ ಡಿನೋಟಿಫಿಕೇಷನ್ ಆರೋಪದಡಿ H.D. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅರ್ಜಿ ಸಲ್ಲಿಸಲಾಗಿತ್ತು. ಜೊತೆಗೆ, ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ ಡಿನೋಟಿಫಿಕೇಷನ್ ಮಾಡಲಾಗಿತ್ತು.

ಡಿನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ನೀಡಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿದ್ದ ಎಫ್‍ ಐಆರ್ ರದ್ದು ಮಾಡಬೇಕೆಂದು ಕೋರಿ ಹೈಕೋರ್ಟ್‍ಗೆ ಸಿಎಂ ಬಿಎಸ್ ವೈ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾ ಮಾಡಿದ ನ್ಯಾಯಾಲಯ, ಲೋಕಾಯುಕ್ತ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದಲ್ಲದೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ  25 ಸಾವಿರ ರೂಪಾಯಿ ‌ದಂಡ ಸಹ ವಿಧಿಸಿ, ನ್ಯಾ. ಜಾನ್ ಮೈಕೆಲ್ ಕುನ್ಹಾ ಆದೇಶ ಹೊರಡಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲೂ ಸಿಎಂ  ಬಿಎಸ್ ವೈಗೆ ಹಿನ್ನಡೆ

ಇದಲ್ಲದೆ, ಮತ್ತೊಂದು ಪ್ರಕರಣದಲ್ಲೂ ಸಿಎಂ ಬಿಎಸ್ ಯಡಿಯೂರಪ್ಪ ಹಿನ್ನೆಡೆ ಅನುಭವಿಸಿದ್ದಾರೆ.  ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಯಡಿಯೂರಪ್ಪ ವಿರುದ್ಧ ಆಲಂ ಪಾಷಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ಅಂಗೀಕರಿಸಿದೆ. ಜೊತೆಗೆ, ಖಾಸಗಿ ದೂರು ಮುಂದುವರಿಸಲು ಹೈಕೋರ್ಟ್ ಆದೇಶಿಸಿದೆ.

2014ರಲ್ಲಿ ಮುರುಗೇಶ್ ನಿರಾಣಿ ವಿರುದ್ಧ ಆಲಂ ಪಾಷಾ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು. ಆಲಂ ಪಾಷಾ ಕಂಪನಿಗೆ ನೀಡಿದ್ದ ಜಮೀನು ವಾಪಸ್ ಪಡೆಯಲು ಅಂದಿನ‌ ಸಿಎಂ ನೇತೃತ್ವದ ಸಮಿತಿ ತೀರ್ಮಾನಿಸಿತ್ತು. ಈ ನಡುವೆ, ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಹಿಂಪಡೆಯಲಾಗಿತ್ತು ಎಂದು ಆರೋಪಿಸಿ ಆಲಂ ಪಾಷಾ ಖಾಸಗಿ ದೂರು ದಾಖಲಿಸಿದ್ದರು.Denotification -CM BS Yeddyurappa-  Double –shock-court.

ಅಂದ ಹಾಗೆ, ಪೂರ್ವಾನುಮತಿ ಇಲ್ಲದ ಕಾರಣ ದೂರಿನ ವಿಚಾರಣೆಗೆ ಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆ ‌ಇದನ್ನು ಪ್ರಶ್ನಿಸಿ ಆಲಂ ಪಾಷಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ, ಆಲಂ ಪಾಷಾ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿದೆ. ಈ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪಗೆ ಡಬಲ್ ಶಾಕ್ ಎದುರಾಗಿದೆ.

ENGLISH SUMMARY….

Setback for CM BSY in land case in court: Rs. 25k fine
Bengaluru, Jan. 05, 2021 (www.justkannada.in): After the Devarabeesanahalli denotification case, Chief Minister B.S. Yedyurappa has faced a set back in two other land denotification cases. The Hon’ble High Court has ordered to continue the investigation against Yedyurappa who is the second accused in the case registered by Alam Pasha and has imposed a sum of Rs. 25,000 fine in the Gangenahalli case by Jaikumar Hiremath.Denotification -CM BS Yeddyurappa-  Double –shock-court.
Keywords: CM BSY/ denotification case/ setback/ Rs.25,000 fine

Key words:  Denotification -CM BS Yeddyurappa-  Double –shock-court.