ಮಸೀದಿಗಳ ಮೇಲಿನ ಧ್ವನಿವರ್ಧಕ ನಿರ್ಬಂಧಕ್ಕೆ ಆಗ್ರಹ.

ಬೆಂಗಳೂರು,ಏಪ್ರಿಲ್,4,2022(www.justkannada.in):  ಹಿಜಾಬ್, ಮುಸ್ಲಿಂ ವ್ಯಾಪಾರಿಗಳ ಮೇಲೆ ನಿರ್ಬಂಧ, ಹಲಾಲ್ ವಿವಾದದ ಬಳಿಕ ಇದೀಗ ಮಸೀದಿಗಳ ಮೇಲಿನ ಧ್ವನಿವರ್ಧಕ ನಿರ್ಬಂಧಕ್ಕೆ ಆಗ್ರಹ ಕೇಳಿ ಬಂದಿದೆ.

ಮಸೀದಿಗಳ ಮೇಲಿನ ಧ್ವನಿ ವರ್ಧಕಗಳಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ರಂಜಾನ್ ಹಿನ್ನೆಲೆ ಮೈಕ್ ಜೊತೆ ಸೈರನ್ ಹಾಕುತ್ತಾರೆ. ಹೀಗಾಗಿ ಜನರಿಗೆ ತೊಂದರೆಯಾಗುತ್ತದೆ. ಅದ್ದರಿಂದ ಸರ್ಕಾರ ಮಧ್ಯ ಪ್ರವೇಶಿಸಿ ಮಸೀದಿಗಳ ಮೇಲಿನ ಧ್ವನಿವರ್ಧಕ ನಿಷೇಧಿಸಬೇಕು  ಎಂದು ಅಂದೋಲಾ ಶ್ರೀ ಆಗ್ರಹಿಸಿದ್ದಾರೆ.

ಹೆಚ್ಚು ಶಬ್ದವಿರುವ ಮಸೀದಿ ಮೇಲಿನ ಧ್ವನಿ ವರ್ಧಕಗಳನ್ನ ನಿಷೇಧ ಮಾಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್  ಠಾಕ್ರೆ ಒತ್ತಾಯಿಸಿದ್ದರು. ಇದೀಗ ಇವರ ಹೇಳಿಕೆ ಬೆಂಬಲಿಸಿ ರಾಜ್ಯದಲ್ಲೂ ಮಸೀದಿಗಳ ಮೇಲಿನ ಧ್ವನಿವರ್ಧಕ ನಿಷೇದಕ್ಕೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಅಂದೋಲ ಶ್ರೀ ಒತ್ತಾಯಿಸಿದ್ದಾರೆ.

Key words: Demands -loudspeaker -restrictions – mosques