ಡೆಲ್ಟಾ ಪ್ಲಸ್ ವೈರಸ್ ಹಿನ್ನೆಲೆ: ಬಾವಲಿ ಚೆಕ್ ಪೋಸ್ಟ್‌ ‌ನಲ್ಲಿ ತಪಾಸಣೆ ಚುರುಕು: ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ.

kannada t-shirts

ಮೈಸೂರು,ಜೂನ್,30,2021(www.justkannada.in): ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾದ ಹಿನ್ನೆಲೆ ಕರ್ನಾಟಕ‌ ಹಾಗೂ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.jk

ಮೈಸೂರು ಜಿಲ್ಲೆ‌ ಹೆಚ್.ಡಿ.ಕೋಟೆಯ ಬಾವಲಿ ಚೆಕ್ ಪೋಸ್ಟ್‌ ‌ನಲ್ಲಿ ತಪಾಸಣೆಯನ್ನ ಚುರುಕುಗೊಳಿಸಲಾಗಿದ್ದು, ಕೇರಳದಿಂದ ಬರುವ ಗೂಡ್ಸ್ ವಾಹನ ಸವಾರರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. 72 ಗಂಟೆಯೊಳಗೆ ಪರೀಕ್ಷೆ ಮಾಡಿಸಿದ ರಿಪೋರ್ಟ್ ಇದ್ದರಷ್ಟೆ ರಾಜ್ಯಕ್ಕೆ ಎಂಟ್ರಿಗೆ ಅವಕಾಶ ನೀಡಲಾಗುತ್ತಿದೆ.

ಗೂಡ್ಸ್ ವಾಹನವಾಗಿದ್ದರೂ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಇಲ್ಲದಿದ್ದರೆ ವಾಪಸ್ಸು ಕಳುಹಿಸಲು ಕ್ರಮಕೈಗೊಳಲಾಗುತ್ತಿದ್ದು, ಜೊತೆಗೆ ರಾಜ್ಯಕ್ಕೆ ಬರುವ ಪ್ರತಿಯೊಬ್ಬರ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಲಾಗುತ್ತಿದೆ. ಗಡಿಯಲ್ಲಿ ಆರೋಗ್ಯ ಇಲಾಖೆ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಹೆಚ್.ಡಿ.ಕೋಟೆ ತಾಲೂಕು ಆರೋಗ್ಯಧಿಕಾರಿ ಡಾ.ರವಿಕುಮಾರ್ ಗಡಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

Key words: Delta Plus -Virus -Checking –mysore- bavali-check post.

 

 

website developers in mysore