“ದೆಹಲಿ ರೈತರ ಪ್ರತಿಭಟನೆ, ಗೋಡೆಗಳ ಬದಲಿಗೆ ಸೇತುವೆಗಳ ನಿರ್ಮಿಸಿ” : ರಾಹುಲ್ ಗಾಂಧಿ ಸಲಹೆ

ಬೆಂಗಳೂರು,ಜನವರಿ,02,2021(www.justkannada.in) : ಪ್ರತಿಭಟನಾನಿರತ ರೈತರು ದೆಹಲಿ ಪ್ರವೇಶಿಸದಂತೆ ಸಿಮೆಂಟ್ ಸುರಿದು ಬ್ಯಾರಿಕೇಡ್ ಗಳನ್ನು ಹಾಕಿ ಭದ್ರಕೋಟೆ ನಿರ್ಮಿಸಿರುವ ಪೊಲೀಸರ ಕ್ರಮ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.Delhi-farmers-protest-walls-Instead-Build-Bridges-Rahul Gandhi-Adviceಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ರೈತರ ಆಗಮನ ತಡೆಯಲು ಗೋಡೆಗಳ ನಿರ್ಮಿಸುವ ಬದಲಿಗೆ, ಸೇತುವೆಗಳನ್ನು ನಿರ್ಮಿಸಿ ಎಂದು ಹೇಳಿದ್ದಾರೆ.Delhi-farmers-protest-walls-Instead-Build-Bridges-Rahul Gandhi-Advice

ಟಿಕ್ರಿ, ಘಾಜಿಪುರ ಹಾಗೂ ಸಿಂಘೂ ಗಡಿಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ರೈತರ ತಡೆಗಾಗಿ ರೈತರು ಒಳ ಪ್ರವೇಶಿಸಿದಂತೆ ರಸ್ತೆಗಳಿಗೆ ಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ಕಿಡಿಕಾರಿದರು.Delhi-farmers-protest-walls-Instead-Build-Bridges-Rahul Gandhi-Advice

ಕ್ರೇನ್ ಮೂಲಕ ರಸ್ತೆಗಳನ್ನು ಅಗೆದು ಗ್ರಿಲ್ ಹಾಗೂ ಮೊಳೆಗಳನ್ನು ಸಿಮೆಂಟ್ ಮೂಲಕ ರಸ್ತೆಗೆ ಜೋಡಿಸಲಾಗಿದೆ. ಇನ್ನು ಬ್ಯಾರಿಕೇಡ್ ಗಳನ್ನು ಅಳವಡಿಸಿ, ಇದು ಭದ್ರವಾಗಿ ನಿಲ್ಲುವ ಸಲುವಾಗಿ ಕಾಂಕ್ರೀಟ್ ಸುರಿದು ಗಟ್ಟಿ ಮಾಡಿ, ತಡೆಗಳನ್ನು ನಿರ್ಮಿಸಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : Delhi-farmers-protest-walls-Instead-Build-Bridges-Rahul Gandhi-Advice