ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಭಾಗಿಯಾಗಿದ್ದವರಿಗೆ ಶಾಲು, ಮೈಸೂರು ಪೇಟ ಹಾಕಿ ಸನ್ಮಾನ…

kannada t-shirts

ಮೈಸೂರು,ಆ,5,2020(www.justkannada.in): ಇಂದು ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದ್ದು, ಡಿ.6 ರಂದು ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಭಾಗಿಯಾದವರಿಗೆ ಮೈಸೂರಿನಲ್ಲಿ ಸನ್ಮಾನ ಮಾಡಲಾಯಿತು.jk-logo-justkannada-logo

ಶಾಸಕ ರಾಮದಾಸ್ ಕಚೇರಿಯಲ್ಲಿ ‌ ಸನ್ಮಾನ ‌ಕಾರ್ಯಕ್ರಮ ನೆರವೇರಿತು. ಮೈಸೂರಿನಿಂದ ಅಯೋಧ್ಯೆ ಹೋಗಿದ್ದ ಸುಬ್ರಹ್ಮಣ್ಯ ಭಟ್, ಕೃಷ್ಣಮೂರ್ತಿ,ಉಮೇಶ್, ಶಂಕರ ಶಾಸ್ತ್ರಿ ಅವರಿಗೆ ಶಾಲು, ಮೈಸೂರು ಪೇಟ ಹಾಕಿ ಜ್ಞಾಪನ ಪತ್ರ ನೀಡಿ ಸನ್ಮಾನಿಸಲಾಯಿತು.

ಇನ್ನು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುತ್ತಿರುವ ಹಿನ್ನೆಲೆ ಶಾಸಕ ಎಸ್.ಎ.ರಾಮದಾಸ್ ಮನೆ‌ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಮ ಮಂದಿರ ಭೂಮಿ ಪೂಜೆ ಸಂಭ್ರಮಕ್ಕೆ ಸಿದ್ಧತೆ ಮಾಡಲಾಗಿದ್ದು ಮನೆ ಬಳಿ ಶ್ರೀರಾಮನ ಬೃಹತ್ ಕಟೌಟ್ ಹಾಕಲಾಗಿದೆ. ಹಾಗೆಯೇ ರಾಮ ಮಂದಿರಕ್ಕಾಗಿ ಶ್ರಮಿಸಿದವರ ಭಾವಚಿತ್ರವುಳ್ಳ ಫ್ಲೆಕ್ಸ್ ಕೂಡ ಹಾಕಲಾಗಿದೆ. Dedicated - participated - Ayodhya –karaseve-mysore- MLA-Ramadas

ಎಲ್.ಕೆ.ಅಡ್ವಾಣಿ, ಪ್ರಧಾನಿ ಮೋದಿಯವರ ವಿಶೇಷ ಫ್ಲೆಕ್ಸ್ ಹಾಕಲಾಗಿದ್ದು ಶಾಸಕ ರಾಮದಾಸ್ ಗೃಹ ಕಚೇರಿಯಲ್ಲಿ ರಾಮ ಭಜನೆ ಮಾಡಲಾಗುತ್ತದೆ. ರಾಮ ಲಕ್ಷ್ಮಣ ಸೀತೆ, ಆಂಜನೇಯ ವಿಗ್ರಹಗಳನ್ನುಟ್ಟು ಪೂಜೆ. ಪ್ರೊಜೆಕ್ಟರ್ ಮೂಲಕ ರಾಮ ಮಂದಿರ ಭೂಮಿ ಪೂಜೆ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ.

Key words: Dedicated – participated – Ayodhya –karaseve-mysore- MLA-Ramadas

website developers in mysore