ಸರ್ಕಾರದಿಂದ ಏಕಾಏಕಿ ಇಂತಹ ನಿರ್ಧಾರ ಸರಿಯಲ್ಲ- ಫೀಲಂ ಚೇಂಬರ್ ಅಧ್ಯಕ್ಷ ಜೈರಾಜ್ ಅಸಮಾಧಾನ …

ಬೆಂಗಳೂರು,ಏಪ್ರಿಲ್,3,2021(www.justkannada.in): ಕೊರೋನಾ 2ನೇ ಅಲೆ ತಡೆಗಾಗಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಗಳನ್ನ ಜಾರಿಮಾಡಿದ್ದು, ಈ ಮಧ್ಯೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿದೆ. ಸರ್ಕಾರದ ಈ ನಿಯಮಕ್ಕೆ ಚಿತ್ರರಂಗ ಅಸಮಾಧಾನ ವ್ಯಕ್ತಪಡಿಸಿದೆ.Illegally,Sand,carrying,Truck,Seized,arrest,driver

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಫೀಲಂ ಚೇಂಬರ್ ಅಧ್ಯಕ್ಷ ಜೈರಾಜ್, ಸರ್ಕಾರದಿಂದ ಏಕಾಏಕಿ ಇಂತಹ ನಿರ್ಧಾರ ಸರಿಯಲ್ಲ. ಇನ್ನು ಮುಂದೆ ನಿಯಮ ಜಾರಿಗೂ ಮುಂಚೆ ಮಾಹಿತಿ ನೀಡಿ. ಈಗ ಸರ್ಕಾರ ಆದೇಶ ಮಾಡಿದೆ ಪಾಲಿಸಲೇ ಬೇಕು ಎಂದಿದ್ದಾರೆ.

ಹಾಗೆಯೇ  ಸರ್ಕಾರ ಈ ರೀತಿ ಏಕಾಏಕಿ ನಿರ್ಧಾರ ಕೈಗೊಂಡರೇ ನಾವೇನು ಮಾಡಬೇಕು. ಏಪ್ರಿಲ್ 10ರವರೆಗೆ ಚಿತ್ರಮಂದಿರಗಳಲ್ಲಿ ಬುಕಿಂಗ್ ಆಗಿದೆ. ಹೀಗಾಗಿ ಚಿತ್ರಮಂದಿರ ಮಾಲೀಕರು ಏನು ಮಾಡಬೇಕು. ಸರ್ಕಾರದ ಆದೇಶ ಸಂಬಂಧ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದರು.decision-government-not-right-film-chamber-president-jairaj

ಚಿತ್ರರಂಗಕ್ಕೆ ನಿಯಮ ಜಾರಿ ಮಾಡಲ್ಲ ಎಂದು ಸಿಎಂ ಮತ್ತು ಸಚಿವರು ಆಶ್ವಾಸನೆ ನೀಡಿದ್ದರು.  ಆದರೆ ಸಚಿವ ಸುಧಾಕರ್ ಗೆ ಚಿತ್ರರಂಗದ ಬಗ್ಗೆ ಮಾಹಿತಿ ಕೊರತೆ ಇದೆ.  ಚಿತ್ರರಂಗದ ಆರೋಗ್ಯದ ಬಗ್ಗೆ ಸಚಿವ ಸುಧಾಕರ್ ಗೆ ಗೊತ್ತಿಲ್ಲ ಎಂದು ಫೀಲಂ ಚೇಂಬರ್ ಅಧ್ಯಕ್ಷ ಜೈರಾಜ್ ನುಡಿದರು.

Key words: decision – government – not right-Film Chamber- President- Jairaj