ವಿವಿಧ ಹಂತದ ಆಡಳಿತಕ್ಕೆ ವಿಕೇಂದ್ರೀಕರಣ ಸಹಕಾರಿ- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮಾರ್ಚ್,10,2022(www.justkannada.in): ವಿಕೇಂದ್ರೀಕರಣವು ಹೊಸ ಮಾದರಿಯ ಆಡಳಿತ ವ್ಯವಸ್ಥೆಯಾಗಿದ್ದು, ವಿವಿಧ ಹಂತಗಳ ಚಟುವಟಿಕೆ ನಿರ್ವಹಣೆಗೆ ಒತ್ತು ನೀಡುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರೊ.ಜಿ.ಟಿ.ಹುಚ್ಚಪ್ಪ ದತ್ತಿ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು. 1993 ರಲ್ಲಿ ಭಾರತ ಸರಕಾರವು ಸಾಂವಿಧಾನಿಕ ತಿದ್ದುಪಡಿಯಿಂದ ನಗರ ಸ್ಥಳೀಯ ಸಂಸ್ಥೆಗಳಿಗೂ ಅಧಿಕಾರ ನೀಡಿತು. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಸಶಕ್ತಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಆ ಮೂಲಕ ವಿಕೇಂದ್ರೀಕರಣವು ವಿವಿಧ ಹಂತಗಳಲ್ಲಿ ಚಟುವಟಿಕೆಗಳ ನಿರ್ವಹಣೆಗೆ ಒತ್ತು ನೀಡುವಂತಾಯಿತು ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಹಾಗೂ ಸಮಾಜದ ಇತರ ದುರ್ಬಲ ವರ್ಗಗಳಂತಹ ಅಂಚಿನಲ್ಲಿರುವವರ ಭಾಗವಹಿಸುವಿಕೆ ಇದೆ. ಇದರಿಂದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕಾಣಬಹುದು. ಸಮಾನತೆಯ ಮತ್ತು ಸಮಾಜದೆಡೆಗಿನ ಆಂದೋಲನವಾಗಿ ಇದು ಪರಿವರ್ತನೆಯಾಗಿದೆ ಎಂದು ತಿಳಿಸಿದರು. ಕೋವಿಡ್ ಕಾರಣದಿಂದ ಕಳೆದ ವರ್ಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ಪ್ರೊ.ವಿ.ಕೆ. ನಟರಾಜ್,ಪ್ರೊ.ಆರ್. ಎಸ್. ದೇಶಪಾಂಡೆ,  ಪ್ರೊ.ಡಿ. ರಾಜಶೇಖರ್ ಉಪನ್ಯಾಸ ನೀಡಿದರು. ವಿಭಾಗದ ಮುಖ್ಯಸ್ಥ ಪ್ರೊ. ಡಿ. ವಿ. ಗೋಪಾಲಪ್ಪ, ದಾವಣಗೆರೆ ವಿವಿ ನಿವೃತ್ತ ಕುಲಪತಿ ಇಂದುಮತಿ ಸೇರಿದಂತೆ ಇತರರು ಇದ್ದರು.

Key words:  Decentralization – helpful-G.Hemanth Kumar