ಮ್ಯಾನ್ ಹೋಲ್ ಒಳಗೆ ಇಳಿದ ಮೂವರು ಕಾರ್ಮಿಕರು ಸಾವು: ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ನಿಖಿಲ್ ಕುಮಾರಸ್ವಾಮಿ.

Promotion

ರಾಮನಗರ,ಜೂನ್,4,2021(www.justkannada.in): ನಿರ್ಮಾಣ ಹಂತದ ಮ್ಯಾನ್ ಹೋಲ್ ಒಳಗೆ ಇಳಿದ ಮೂವರು ಕಾರ್ಮಿಕರು ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನ ರಾಮನಗರದಲ್ಲಿ ನಡೆದಿದೆ.jk

ರಾಮನಗರ ಐಜೂರು ಬಳಿ ನೇತಾಜಿ ಪಾಪೂಲರ್ ಶಾಲೆ ಮುಂಭಾಗ  ಈ ಘಟನೆ ನಡೆದಿದೆ. ಜೀವನ ನಿರ್ವಹಣೆಗಾಗಿ ಲಾಕ್ ಡೌನ್ ಲೆಕ್ಕಿದೆ ಮೂವರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ನಡುವೆ ನಿರ್ಮಾಣ ಹಂತದ ಮ್ಯಾನ್ ಹೋಲ್ ಗೆ ಇಳಿದು ಕೆಲಸ ಮಾಡುವ ವೇಳೆ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ರಾಮನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.  ಬಳಿಕ ಎಸ್ಪಿ ಕಚೇರಿಗೆ ಭೇಟಿ ನೀಡಿ ಘಟನೆ ಬಗ್ಗೆ ಎಸ್ಪಿ ಅವರಿಂದ ಮಾಹಿತಿ ಪಡೆದ ನಿಖಿಲ್ ಕುಮಾರಸ್ವಾಮಿ, ಕಾರ್ಮಿಕರ ಸಾವಿನಿಂದ ಅವರ ಕುಟುಂಬ ವರ್ಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸರ್ಕಾರದಿಂದ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

Key words: deaths -three workers – manhole-death- Nikhil Kumaraswamy – compensation