ಚಾಕು ಇರಿತಕ್ಕೊಳಗಾಗಿದ್ದ ಬಂಗಾರಪೇಟೆ ತಹಸೀಲ್ದಾರ್ ಚಿಕಿತ್ಸೆ ಫಲಿಸದೇ ಸಾವು

Promotion

ಕೋಲಾರ, ಜುಲೈ 09, 2020 (www.justkannada.in): ಸರ್ವೇ ನಡೆಸಲು ಹೋದ ವೇಳೆ ಚಾಕು ಇರಿತಕ್ಕೊಳಗಾಗಿದ್ದ ತಹಸೀಲ್ದಾರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ ಮೃತರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಚಾಕು ಇರಿದಿದ್ದು, ಗಂಭೀರ ಸ್ಥಿತಿಯಲ್ಲಿರುವ ತಹಶಸೀಲ್ದಾರ್ ರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರೋಪಿ ಪರಾರಿಯಾಗಿದ್ದು, ಕಾಮಸಮುದ್ರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.