ಸಾವಿನ ಮನೆಯಾದ ಅಮೆರಿಕಾ: 24 ಗಂಟೆಗಳಲ್ಲಿ 4, 591 ಮಂದಿ ಬಲಿ

ವಾಷಿಂಗ್ಟನ್, 17, 2020 (www.justkannada.im): ಮಾರಕ ಕೊರೋನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ ಅಮೆರಿಕಾದಲ್ಲಿ 4 ಸಾವಿರದ 591 ಮಂದಿ ಬಲಿಯಾಗಿದ್ದು, ಜಗತ್ತಿನಲ್ಲಿಯೇ ಅಧಿಕವಾಗಿದೆ.

ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶ ಪ್ರಕಾರ ನಿನ್ನೆ ರಾತ್ರಿ 8 ಗಂಟೆ ಹೊತ್ತಿಗೆ ಕೇವಲ 24 ಗಂಟೆಗಳಲ್ಲಿ 4 ಸಾವಿರದ 591 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ.ಇದಕ್ಕಿಂತ ಮೊದಲು ಬುಧವಾರ ಸೋಂಕಿಗೆ ಅಲ್ಲಿ 2 ಸಾವಿರದ 569 ಮಂದಿ ಮೃತಪಟ್ಟಿದ್ದರು. ನಿನ್ನೆ ಹೊತ್ತಿಗೆ ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷದ 62 ಸಾವಿರಕ್ಕೇರಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು ಇಲ್ಲಿಯವರೆಗೆ ಪ್ರಪಂಚದಾದ್ಯಂತ 1 ಲಕ್ಷದ 44 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿದೆ. 2.1 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಸೋಂಕಿತರು ವಿಶ್ವದಲ್ಲಿದ್ದಾರೆ.

ಅಮೆರಿಕದಲ್ಲಿ 6 ಲಕ್ಷದ 71 ಸಾವಿರ ಮಂದಿ ಸೋಂಕಿತರಾಗಿದ್ದು 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ಅತಿಹೆಚ್ಚಿನ ಸೋಂಕಿತರಿದ್ದಾರೆ.