ಪೊಲೀಸರ ವಶದಲ್ಲಿದ್ಧ ವಿದೇಶಿ ಪ್ರಜೆ ಸಾವು:  ಆಫ್ರಿಕನ್ ಪ್ರಜೆಗಳಿಂದ ಧರಣಿ ವೇಳೆ ಕಾನ್ಸ್ ಟೇಬಲ್ ಗಳ ಮೇಲೆ ಹಲ್ಲೆ: ಲಾಠಿಚಾರ್ಜ್.

ಬೆಂಗಳೂರು,ಆಗಸ್ಟ್,2,2021(www.justkannada.in): ಪೊಲೀಸರ ವಶದಲ್ಲಿದ್ಧ ವಿದೇಶಿ ಪ್ರಜೆ ಸಾವನ್ನಪ್ಪಿದ ಹಿನ್ನೆಲೆ ಪೊಲೀಸ್ ಠಾಣೆ ಎದುರು ವಿದೇಶಿ ಪ್ರಜೆಗಳು ಧರಣಿ ನಡೆಸಿ ಕಾನ್ಸ್ ಟೇಬಲ್ ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಜೆಸಿ ನಗರ ಪೊಲೀಸ್ ಠಾಣೆ ಎದುರು ಈ ಘಟನೆ ನಡೆದಿದೆ. ಡ್ರಗ್ಸ್ ಕೇಸ್ ಸಂಬಂಧ ವಿದೇಶಿ ಪ್ರಜೆಯನ್ನ ಜೆಸಿ ನಗರ ಪೊಲೀಸರು ವಶಕ್ಕೆ ಪಡೆದಿದ್ದರು . ಈ ಮಧ್ಯೆ ವಿದೇಶಿ ಪ್ರಜೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿದೇಶಿ ಪ್ರಜೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಈ ಮಧ್ಯೆ ಪೊಲೀಸರು ಹೊಡೆದು ಕೊಂದಿದ್ದಾರೆಂದು ಆರೋಪಿಸಿ ಆಫ್ರಿಕನ್ ಪ್ರಜೆಗಳು ಜೆ.ಸಿನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ಈ ವೇಳೆ ಕಾನ್ಸ್ ಟೇಬಲ್ ಕೆಂಪಣ್ಣ, ಸಂತೋಷ್  ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರತಿಭಟನೆ ವೇಳೆ ಆಫ್ರಿಕನ್ ಪ್ರಜೆಗಳು  ಪೊಲೀಸರ ಜತೆಯೇ ವಾಗ್ವಾದಕ್ಕಿಳಿದು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು ಈ ಸಮಯದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿ ಆಫ್ರಿಕನ್ ಪ್ರಜೆಗಳನ್ನ ಚದುರಿಸಿದ್ದಾರೆ.

Key words: Death -foreign – police custody- Attack – African Citizens-protest- Lathicharge.