“ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ನೆರವು ಮುಂದುವರಿಕೆ” : ಸಿಎಂ ಬಿ.ಎಸ್.ವೈ

kannada t-shirts

ಬೆಂಗಳೂರು,ಜನವರಿ,22,2021(www.justkannada.in) : ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವ ಮೂಲಕ ಸರ್ಕಾರದ ನೆರವಿನ ಸ್ಪಂದನೆ‌ ಮುಂದುವರೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.jkಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷ ಶಿವಾನಂದ ತಗಡೂರು  ನೀಡಿದ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಹಣಕಾಸು ಸ್ಥಿತಿ ಸಂಕಷ್ಟದಲ್ಲಿ ಇದ್ದಾಗಲೂ, ನೊಂದ ಪತ್ರಕರ್ತರ ಕುಟುಂಬಗಳಿಗೆ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಸಂಘದ ಮನವಿಗೆ ಸ್ಪಂದಿಸಿ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಕುಟುಂಬಗಳಿಗೆ ನೆರವು ನೀಡುವ ಮೂಲಕ ಅವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ದೇಶದಲ್ಲಿಯೇ ರಾಜ್ಯ ಮಾದರಿಯಾಗಿದೆ ಎಂದರು. ಅದಲ್ಲದೇ, ಪತ್ರಕರ್ತರ ಸಮ್ಮೇಳನಕ್ಕೆ ನೆರವು ಒದಗಿಸುವ ಭರವಸೆ ನೀಡಿದರು.ಇದಕ್ಕೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಸಮಸ್ತ ಪತ್ರಕರ್ತರ ಪರವಾಗಿ ಅಭಿನಂದನೆ ಸಲ್ಲಿಸಿದರು.

ENGLISH SUMMARY….

CM BSY assures financial help for the families of deceased journos
Bengaluru, Jan. 22, 2021 (www.justkannada.in): Chief Minister B.S. Yedyurappa has assured to continue giving Rs.5 lakh compensation from the government for the family members of journalists who died because of Covid.Dead-Journalists-family-Assistance-Continuing-CM B.S.Y
Responding after receiving the appeal submitted by Karnataka Union of Working Journalists (KUWJ) President Shivanand Tagaduru, Chief Minister B.S. Yedyurappa said that compensation is given to the family members of the bereaved family members of the journalists who lost their lives, even when the government was facing a financial crunch.
“Our State has been a model for others in wiping the tears of the families of the deceased during Covid times,” he said and also assured that he would try to provide financial help for the journalists’ conference.
Keywords: KUWJ/ Shivanand Tagaduru/ Chief Minister B.S. Yedyurappa/ Rs. 5 lakh compensation for family members of deceased journalists

key words : Dead-Journalists-family-Assistance-Continuing-CM B.S.Y

website developers in mysore