ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಹೇಳಿಕೆ ಕುರಿತು ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಡಿಸಿಎಂ ಗೋವಿಂದ ಕಾರಜೋಳ….

kannada t-shirts

ಮೈಸೂರು,ಸೆ,3,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ದ ನೀಡಿದ್ದ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ನಾನು ಸಂಕಷ್ಟದಲ್ಲಿರುವ ವ್ಯಕ್ತಿಯನ್ನು ನೋಡಿ ಖುಷಿಪಡುವಷ್ಟ ಕೆಟ್ಟವನಲ್ಲ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ಯಾವತ್ತೂ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರಿಗೆ ಆಗಮಿಸಿದ  ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಮಾಧ್ಯಮದವರ ಜತೆ ಮಾತನಾಡಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ವಿಚಾರ ಕುರಿತು ಸ್ಪಷ್ಟನೆ ನೀಡಿದ ಗೋವಿಂದ ಕಾರಜೋಳ, ಉಪ್ಪು ತಿಂದಿದ್ದರೆ ನೀರು ಕುಡಿಯಬೇಕಾಗುತ್ತೆ ಅಂತ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ..? ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತೆ ಅಂತ ಹೇಳಿದ್ದೇನೆ. ತಪ್ಪು ಮಾಡದೇ ಇದ್ದರೆ ಆತಂಕ ಪಡುವ ಅಗತ್ಯವೇ ಇಲ್ಲ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ಯಾವತ್ತೂ ನೀಡುವುದಿಲ್ಲ. ನಾನು ವಿವಾದ ಆಗುವಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.

ಹಾಗೆಯೇ ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯರು. ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಬೇರೊಬ್ಬರ ಸಂಕಷ್ಟ ನೋಡಿ ಖುಷಿ ಪಡುವ ಮನಸ್ಥಿತಿ ನನ್ನದಲ್ಲ.ದಯವಿಟ್ಟು ಕ್ಷಮಿಸಿ ನಾನು ವಾಪಸ್ಸು ಪಡೆಯುವಂತ ಹೇಳಿಕೆಯನ್ನೆ ಕೊಟ್ಟಿಲ್ಲ. ನಾನು ನಾನ್ ಕಾಂಟ್ರವರ್ಷಿಯಲ್ಲಿ ಮನುಷ್ಯ. ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಹಾಗೆಯೇ ಇಡಿ ಮತ್ತು ಐಟಿ ಸಂಸ್ಥೆಗಳು ಕಾಂಗ್ರೆಸ್ ಅಧಿಕಾರವಧಿಯಲ್ಲಿ ಮಾಡಿದ ತನಿಖೆಗಳನ್ನ ರಾಜಕೀಯ ಪ್ರೇರಿತ ಎಂದು ಹೇಳೋಕೆ ಆಗುತ್ತಾ. ಈಗಲೂ ನೀವು ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಕು‌. ಅವುಗಳು ಸ್ವತಂತ್ರ ಸಂಸ್ಥೆಗಳು.ಈ ಮಾತನ್ನೇ ನಾನು ಡಿಕೆಶಿಯವರ ವಿಚಾರದಲ್ಲಿ ಹೇಳಿದ್ದೆ. ನನ್ನ ಹೇಳಿಕೆಯನ್ನ ತಪ್ಪಾಗು ಅರ್ಥೈಸಲಾಗಿದೆ ಎಂದರು.

ಕೊಯ್ನಾ ನದಿಯಿಂದ ಹೊರಹರಿವು ಹೆಚ್ಚಳ ಹಿನ್ನೆಲೆ‌. ಉತ್ತರ ಕರ್ನಾಟಕ ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ನೆರ ಪೀಡಿತ ಪ್ರದೇಶಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೋದಿ ಬರುವ ದಿನಾಂಕ ನಿಗದಿಯಾಗಿದ್ದು ಅವರ ಕಾರ್ಯಕ್ರಮದ ಮಾಹಿತಿ ನನಗೆ ಇಲ್ಲ ಎಂದು ಗೋವಿಂದ ಕಾರಜೋಳ ತಿಳಿಸಿದರು.

90% ಭಾಗದಷ್ಟು ನಿರಾಶ್ರಿತರಿಗೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ತಲುಪಿದೆ

ನಿರಾಶ್ರಿತರಿಗೆ ಪರಿಹಾರ ಹೆಚ್ಚಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ  ಕುರಿತು ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಕೇಂದ್ರದ ನಿಯಮಾನುಸಾರಕ್ಕಿಂತ ಪರಿಹಾರ ಕೊಟ್ಟಿದ್ದೇವೆ. ಸದ್ಯಕ್ಕೆ ಅದನ್ನ ಮೀರಿ ಹಣ ನೀಡಲು ಸಾದ್ಯವಿಲ್ಲ.90% ಭಾಗದಷ್ಟು ನಿರಾಶ್ರಿತರಿಗೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ತಲುಪಿದೆ. ಉಳಿದ 10% ರಷ್ಟು ಜನರಿಗೆ ಆಧಾರ್ ಕಾರ್ಡ್‌ನಿಂದ ಬ್ಯಾಂಕರ್‌ಗಳಿಂದ ಸಮಸ್ಯೆ ಆಗಿದೆ.ಈ ಸಮಸ್ಯೆಗೆ ಚಕ್ ಮೂಲಕ ಹಣ ನೀಡಲು ಸೂಚನೆ ನೀಡಿದ್ದೇವೆ. ಎಲ್ಲಾ ಸಮಸ್ಯೆಯನ್ನ ಶೀಘ್ರದಲ್ಲೆ ಪರಿಹಾರ ಮಾಡುತ್ತೇವೆ ಎಂದು ಗೋವಿಂದ ಕಾರಜೋಳ ಮಾಹಿತಿ ನೀಡಿದರು.

ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಯಾರೆ ಬಂದರು ಪಕ್ಷಕ್ಕೆ ಸ್ವಾಗತ..

ಡಿ ಕೆ ಶಿವಕುಮಾರ್ ಅವರನ್ನ ಬಿಜೆಪಿಗೆ ಬಲವಂತವಾಗಿ ಸೆಳೆಯಲು ಇಡಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಬಿಜೆಪಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇದೆ. ಕಾಶ್ಮೀರದಲ್ಲಿ ಈಗ ಭಾರತದ ಆಡಳಿತ ನಡೆಯುತ್ತಿದೆ.ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಯಾರೆ ಬಂದರೂ ಪಕ್ಷಕ್ಕೆ ಸ್ವಾಗತ ಎಂದರು.

Key words: DCM -Govind Karajola -Mysore – statement –against- former minister- DK Shivakumar.

website developers in mysore