ತಾವು ಓದಿದ್ಧ ಶಾಲೆಗೆ ಭೇಟಿ ನೀಡಿದ  ಡಿಸಿಎಂ ಡಿ.ಕೆ ಶಿವಕುಮಾರ್.

kannada t-shirts

ಬೆಂಗಳೂರು,ಮೇ,29,2023(www.justkannada.in): ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು, ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ತಾವು ಓದಿದ್ಧ ಶಾಲೆಗೆ ಇಂದು ಭೇಟಿ ನೀಡಿದ್ದಾರೆ.

ಇಂದು ಬೆಳಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ತಾವು ಓದಿದ್ದ ಬೆಂಗಳೂರಿನ ರಾಜಾಜಿನಗರದ ಎನ್​ಪಿಎಸ್​ ಶಾಲೆಗೆ ಭೇಟಿ ನೀಡಿದರು. ಎನ್​ಪಿಎಸ್​ ಶಾಲೆಯಲ್ಲೇ ಡಿಕೆ ಶಿವಕುಮಾರ್ ಹಾಗೂ ಅವರ ಮಕ್ಕಳು ವ್ಯಾಸಂಗ ಮಾಡಿದ್ದರು. ಇದೀಗ ತಾವು ಕಲಿತಿದ್ದ ಶಾಲೆಗೆ ಡಿಕೆ ಶಿವಕುಮಾರ್ ಸೌಹಾರ್ದವಾಗಿ ಭೇಟಿ ನೀಡಿ ​ ಶಾಲೆ ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಅವರ ಜತೆ ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ನಾನು ಇದೇ ಶಾಲೆಯಲ್ಲಿ ಓದಿದ್ದೆ. ಭಾರತಕ್ಕೆ ಮೊದಲ ಅಟಾನಾಮಸ್ ಶಾಲೆ ಇದು. ದೊಡ್ಡ ಬೆಂಚ್ ಮಾರ್ಕ್ ಸ್ಥಾಪನೆ ಮಾಡಿದ ಶಾಲೆ ಇದು. ನನ್ನ ಮಕ್ಕಳು ಓದಿದ್ದು ಇದೇ ಶಾಲೆಯಲ್ಲಿ. ಈ ಶಾಲೆ ಬೆಲೆ ಏನು ಅಂತ ನನಗೆ ಗೊತ್ತಿದೆ  ಎಂದರು.

ಶಿಕ್ಷಣಕ್ಕಾಗಿ ವಲಸೆ ಬರುವ ಮಕ್ಕಳು  ಹೆಚ್ಚು ಇದ್ದಾರೆ. ಹೀಗಾಗಿ ಪಂಚಾಯಿತಿ ಮಟ್ಟದಲ್ಲಿ ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೇಯ. ರೈತರ ಮಕ್ಕಳಿಗೆ ಕ್ವಾಲಿಟಿ ಎಜುಕೇಶನ್ ಕೊಡುವುದು ನಮ್ಮ ಕನಸು. ಇದನ್ನ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ  ಎಂದರು.

Key words: DCM -DK Shivakumar- visited – school – studied.

website developers in mysore