ಹಿರಿಯ ಪತ್ರಕರ್ತ ನಿರಂಜನ್‌ ನಿಕ್ಕಂ ನಿಧನಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಸಂತಾಪ…

ಬೆಂಗಳೂರು,ಫೆಬ್ರವರಿ,17,2021(www.justkannada.in):  ನಾಡಿನ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ನಿರಂಜನ್‌ ನಿಕ್ಕಂ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.jk

ʼಸ್ಟಾರ್‌ ಆಫ್‌ ಮೈಸೂರುʼ, ʼಡೆಕ್ಕನ್ ಹೆರಾಲ್ಡ್ʼ ಪತ್ರಿಕೆಯ ಹಿರಿಯ ವರದಿಗಾರರಾಗಿ ಸಮಾಜಮುಖಿ ಸೇವೆ ಸಲ್ಲಿಸಿದ ಅವರು ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಸಮಾಜಕ್ಕೆ ಉಪಯುಕ್ತವಾದ, ಸರಕಾರ- ಅಧಿಕಾರಿಗಳ ಕಣ್ತೆರೆಸುವ ಮಾನವೀಯ ವರದಿಗಳನ್ನು ಅವರು ಬರೆಯುತ್ತಿದ್ದರು. ಜತೆಗೆ; ವಿಜ್ಞಾನ-ತಂತ್ರಜ್ಞಾನದ ಬಗ್ಗೆಯೂ ನಿರರ್ಗಳವಾಗಿ ಬರೆಯುತ್ತಿದ್ದರು. ಪತ್ರಿಕೋದ್ಯಮ ಕಾಲೇಜು ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆಯನ್ನೂ ಮಾಡಿದ್ದರು. ಮೈಸೂರು ವಿಶ್ವವಿದ್ಯಾಲಯದ ಕುರಿತಾಗಿ ಅವರು ತಮ್ಮ ಪತ್ನಿ ಡಾ.ಪಮೇಲಾ ಸನಾಥ್‌ ಅವರೊಡಗೂಡಿ ಹೊರತಂದಿರುವ ʼದಿ ಹಂಡ್ರಡ್‌ ಇಯರ್ಸ್‌ ಯುನಿವರ್ಸಿಟಿ ಆಫ್‌ ಮೈಸೂರು-1916 -2016 ʼ ಕಾಫಿ ಟೇಬಲ್‌ ಪುಸ್ತಕವು ನಿರಂಜನ್‌ ನಿಕ್ಕಂ ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ನಿರಂಜನ್‌ ನಿಕ್ಕಂ ಅವರ ಗುಣಗಾನ ಮಾಡಿದ್ದಾರೆ.DCM Ashwath Narayan -condoles - death - senior journalist- Niranjan Nikkam.

ಅವರ ನಿಧನ ದುಃಖವುಂಟು ಮಾಡಿದೆ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಹಾಗೂ ಮೃತರಿಗೆ ಚಿರಶಾಂತಿ ನೀಡಲಿ ಎಂದು ಡಿಸಿಎಂ ಪ್ರಾರ್ಥಿಸಿದ್ದಾರೆ.

Key words: DCM Ashwath Narayan -condoles – death – senior journalist- Niranjan Nikkam.