ಜನರ ಕಷ್ಟಕ್ಕೆ ಸ್ಪಂದಿಸಲಿದೆ “ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ”ಕಾರ್ಯಕ್ರಮ- ಸಚಿವ ಸೋಮಶೇಖರ್

ಹಿರೇಕೆರೂರು,ಫೆಬ್ರವರಿ,15,2021(www.justkannada.in):  ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ಕಂದಾಯ ಸಚಿವರಾದ ಆರ್.ಅಶೋಕ್ ಅವರು ರೈತರು ಹಾಗೂ ಹಳ್ಳಿಗಾಡಿನ ಜನರಿಗಾಗಿ ಮಹತ್ವದ ನಿರ್ಧಾರ ಕೈಕೊಂಡಿದ್ದಾರೆ. ಪ್ರತಿ ತಿಂಗಳ ಮೂರನೇ ಶನಿವಾರ “ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ” ಎಂಬ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಇದು ಜನರ ಸಂಕಷ್ಟಗಳ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.jk

ಇಲ್ಲಿನ ಹಂಸಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಜಿಲ್ಲಾಧಿಕಾರಿಗಳು ಸೂಟುಬೂಟು ಹಾಕಿ ಕೆಲಸ ಮಾಡಿದರೆ ಸಾಲದು. ಅವರಿಗೆ ಜನರ ಸಂಕಷ್ಟಗಳು ತಿಳಿಯಬೇಕು. ಜೊತೆಗೆ ತಕ್ಷಣ ಸ್ಪಂದನೆಗಳು ಸಿಗಬೇಕು. ಇದಕ್ಕೆ ಎಸಿ ಕಚೇರಿಯಲ್ಲಿ ಕುಳಿತರೆ ಆಗದು. ಹೀಗಾಗಿ ಅವರು ಹಳ್ಳಿಗಳಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಿತ ಹೋಗಿ ಜನರಿದ್ದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ನಮ್ಮ ನಾಯಕರುಗಳಾದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಈ ನಿರ್ಧಾರದಿಂದ ಜನರ ಕಷ್ಟ ಕಾರ್ಪಣ್ಯಗಳು ದೂರಾಗಲಿದೆ. ಅವರಿದ್ದಲ್ಲಿಗೆ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟಕ್ಕಾಗಿ ಶೀಘ್ರ ಸಭೆ

ಹಾವೇರಿಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಸ್ಥಾಪನೆ ಬೇಡಿಕೆ ಈಡೇರಿಕೆ ಕುರಿತು ಶೀಘ್ರ ಸಭೆ ನಡೆಸಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಹೇಳಿದರು.

ಈ ಬೇಡಿಕೆಗಳ ಬಗ್ಗೆ ಈಗಾಗಲೇ ಸಭೆಗಳನ್ನು ನಡೆಸಿದ್ದೇನೆ. ಮೂರು ಜಿಲ್ಲೆಗಳ ಒಳಗೊಂಡಿರುವ ಇಲ್ಲಿನ ಡಿಸಿಸಿ ಬ್ಯಾಂಕ್ ಅನ್ನು ಪ್ರತ್ಯೇಕಗೊಳಿಸಿವ‌ ಸಂಬಂಧ ಸಂಬಂಧಪಟ್ಟ ಜಿಲ್ಲೆಗಳ ಸಚಿವರು ಹಾಗೂ ಶಾಸಕರುಗಳ ಸಭೆ ನಡೆಸಲಾಗವುದು ಎಂದು ಸಚಿವರಾದ ಸೋಮಶೇಖರ್  ತಿಳಿಸಿದರು.Minister- ST Somashekhar-minister- bc patil-haveri

ಹಾಲು ಒಕ್ಕೂಟಗಳನ್ನೂ ಪ್ರತ್ಯೇಕ ಮಾಡಿದಲ್ಲಿ ಸ್ವತಂತ್ರವಾಗಿ ಜಿಲ್ಲಾಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡಲು ಅನುಕೂಲವಾಗಲಿದೆ. ಈ ಸಂಬಂಧ ಶೀಘ್ರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಮಾರ್ಚ್ 31ರೊಳಗೆ ಸಾಲ ವಿತರಣೆ ಗುರಿ ಸಂಪೂರ್ಣ

ಕೋವಿಡ್ 1ರ ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಆಶಯದಂತೆ 2020-21ನೇ ಆರ್ಥಿಕ ವರ್ಷದಲ್ಲಿ 24.50 ಲಕ್ಷ ರೈತರಿಗೆ 15300 ಕೋಟಿ ರೂಪಾಯಿ ಸಾಲ ವಿತರಣೆ ಮಾಡುವ ಗುರಿಯನ್ನು ಹಾಕಿಕೊಂಡಿದ್ದೆವು. ಅದರಂತೆ 14/02/2021ರ ವರೆಗೆ 20,78,545 ರೈತರಿಗೆ 13555.10 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ. ಇದೇ ಮಾರ್ಚ್ 31 ರೊಳಗೆ ನಾವು ಹಾಕಿಕೊಂಡಿರುವ ಗುರಿಯನ್ನು ಮುಟ್ಟುವುದಾಗಿ ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಕೃಷಿ ಸಚಿವರ ಗ್ರಾಮ ವಾಸ್ತವ್ಯದ ಪರಿಣಾಮ ಪ್ರದೇಶವಾರು ರೈತರ ಸಮಸ್ಯೆ ತಿಳಿಯಲು ಸಾಧ್ಯವಾಗಿದೆ. ಇದೇ ಮಾದರಿಯಲ್ಲಿ ಜನರ ಸಮಸ್ಯೆ ನಿವಾರಣೆಗೆ ನಮ್ಮ ಸರ್ಕಾರ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮಗಳ ಕಡೆಗೆ ಕಾರ್ಯಕ್ರಮ ರೂಪಿಸಿದೆ. ಬರುವ ದಿನಗಳಲ್ಲಿ ಕಂದಾಯ ಸಚಿವರು ಸಹ ಗ್ರಾಮ ವಾಸ್ತವ್ಯ ಕೈಗೊಳ್ಳಲಿದ್ದು, ಸಚಿವರುಗಳ ಜನರಿಗೆ ಹತ್ತಿರವಾಗಲಿದ್ದಾರೆ. ಇದರಿಂದ ಜನರ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಸಹಕಾರ ಕ್ಷೇತ್ರದಲ್ಲಿ ಸಹಕಾರ ಬೇಕು

ಸಹಕಾರ ಕ್ಷೇತ್ರದಲ್ಲಿ ಅಸಹಕಾರ ಇರಕೂಡದು. ಇಲ್ಲಿ ಪರಸ್ಪರ ಹೆಜ್ಜೆ ಹಾಕಿದರಷ್ಟೇ ಯಶಸ್ಸು ಸಾಧ್ಯ. ಪಕ್ಷಾತೀತವಾಗಿ ದುಡಿದಾಗ ಸಹಕಾರ ಕ್ಷೇತ್ರ ಮುಂದೆ ಬರುತ್ತದೆ. ಹಂಸಭಾವಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂರು ವರ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆದಿದೆ ಎಂದರೆ ಇದರ ಹಿಂದಿನ ಶ್ರಮ, ಬದ್ಧತೆ ನಮಗೆ ತಿಳಿಯುತ್ತದೆ. ದಿವಂಗತ ಹುಚ್ಚಪ್ಪನವರು ವೀರಪ್ಪನವರು ನೆಲವಿಗಿ ಅವರ ದೂರದೃಷ್ಟಿಯ ಫಲ ಈಗ ಜನತೆ ಸಿಗುತ್ತಿದೆ. ಇಂತಹ ಒಂದು ಸಹಕಾರ ಸಂಘದ  ಶತಮಾನೋತ್ಸವ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ನನಗೆ ಸಂತಸವಾಗುತ್ತದೆ ಎಂದು ತಿಳಿಸಿದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಈ ಸಹಕಾರ ಸಂಘಗಳು ಮಾಡುತ್ತವೆ. ಇಂತಹ ಕ್ಷೇತ್ರದಲ್ಲಿ ಬದ್ಧತೆ ಹಾಗೂ ಪ್ರಾಮಾಣಿಕತೆ ಇರಬೇಕು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಸೇರಿದಂತೆ ಹಿರಿಯ ಸಹಕಾರಿಗಳು, ಅಧಿಕಾರಿಗಳು ಹಾಜರಿದ್ದರು.

ಕೃಷಿ ಸುಸ್ಥಿರ ಯೋಜನೆಯಡಿ ಹಸು ವಿತರಣೆ

ಹಂಸಭಾವಿ ಜಾನುವಾರು ಮಾರುಕಟ್ಟೆಯಲ್ಲಿ ಕೃಷಿ ಇಲಾಖೆ ಆಯೋಜಿಸಿದ ಕೃಷಿ ಸುಸ್ಥಿರ ಯೋಜನೆಯಡಿ ಹೈನುಗಾರಿಕೆ ಕೈಗೊಳ್ಳಲು 86 ಫಲಾನುಭವಿಗಳಿಗೆ ಹಸುಗಳನ್ನು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ವಿತರಿಸಿದರು.

Key words: DC Walk to the Village- program -l respond – people’s – Minister ST  Somashekhar.