ರಾಣಿ ಸೊಯಮೊಯಿ ಎಂಬ ‘ ನಕಲಿ ಜಿಲ್ಲಾಧಿಕಾರಿ’…!

ಹೈದ್ರಾಬಾದ್, ಜನವರಿ ೨೮, ೨೦೨೨ (www.justkannada.in): ಕೇರಳದ ಮಲಪ್ಪುರಂ ಜಿಲ್ಲೆಯ ಜಿಲ್ಲಾಧಿಕಾರಿ ರಾಣಿ ಸೊಯಮೊಯಿ ಅವರ ವೈಯಕ್ತಿಕ ಚರಿತ್ರೆಯ ಕುರಿತ ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡಿರುವ ಒಂದು ಪೋಸ್ಟ್ ಇತ್ತೀಚೆಗೆ ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ಪೋಸ್ಟ್ನಲ್ಲಿ ಜಿಲ್ಲಾಧಿಕಾರಿಯ ಆತ್ಮಚರಿತ್ರೆ ಹಾಗೂ ಜೀವನದ ಕುರಿತು ಅವರು ಕಾಲೇಜು ವಿದ್ಯಾರ್ಥಿಯೊಬ್ಬರೊಂದಿಗೆ ನಡೆಸಿರುವ ಸಂವಾದದ ವಿವರಗಳಿವೆ.
“ಮಲ್ಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ ರಾಣಿ ಸೊಯಮೊಯಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ… ಮಕ್ಕಳು ಜಿಲ್ಲಾಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ.
ಪ್ರಶ್ನೆ: ನಿಮ್ಮ ಹೆಸರೇನು? ನನ್ನ ಹೆಸರು ರಾಣಿ. ಸೊಯಮೊಯ ನನ್ನ ಕುಟುಂಬದ ಹೆಸರು. ನಾನು ಜಾರ್ಖಂಡ್ ರಾಜ್ಯದವಳು… ನಾನು ಕಾಗೆಬಂಗಾರ (mica) ಗಣಿಗಳಿಂದ ತುಂಬಿರುವ ಕೊಡೆರ್ಮಾ ಜಿಲ್ಲೆಯ ಒಂದು ಬುಡಕಟ್ಟು ಕುಟುಂಬದಲ್ಲಿ ಒಂದು ಸಣ್ಣ ಗುಡಿಸಲಿನಲ್ಲಿ ಜನಿಸಿದೆ. ನನ್ನ ಪೋಷಕರಿಬ್ಬರೂ ಮೈಕಾ ಗಣಿಗಳಲ್ಲಿ ಕೆಲಸ ಮಾಡುವವರು. ನನಗೆ ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿಯಿದ್ದಾರೆ. ನಾವು ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದೆವು. ಮಳೆಗಾಲದಲ್ಲಿ ಗುಡಿಸಲಿನ ಒಳಗೆ ನೀರು ಸೋರುತಿತ್ತು. ನನಗೆ ನಾಲ್ಕು ವರ್ಷ ವಯಸ್ಸಿದ್ದಾಗ ನನ್ನ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ನನಗೆ ಐದು ವರ್ಷವಿದ್ದಾಗ ನನ್ನ ಭಾವ ಖಾಯಿಲೆಯಿಂದ ಮೃತಪಟ್ಟರು. ಒಂದು ದಿನ ನನಗೆ ತುಂಬಾ ಹಸಿವಾಗಿತ್ತು. ನನ್ನ ತಂದೆ ನನ್ನನ್ನು ಕಬ್ಬಿಣದ ಶೀಟುಗಳಿರುವ ಒಂದು ದೊಡ್ಡ ಗಣಿಗೆ ಎಳೆದುಕೊಂಡು ಹೋದರು. ಅದೊಂದು ಮೈಕಾ ಗಣಿಯಾಗಿತ್ತು. ನನಗೆ ಬಹುಶಃ ಆಗ ಕೇವಲ ಆರು ವರ್ಷ ಅನಿಸುತ್ತದೆ. ಕೊನೆಗೊಂದು ದಿನ ನಾನು ಸರ್ಕಾರಿ ಅಗತಿ ಮಂದಿರ ತಲುಪಿದೆ. ಅಲ್ಲಿ ನನ್ನ ಶಿಕ್ಷಣ ನಡೆಯಿತು. ನಾನು ಮೊದಲ ಬಾರಿಗೆ ನನ್ನ ಗ್ರಾಮದಲ್ಲಿ ಅಕ್ಷರಾಭ್ಯಾಸ ನಡೆಸಿದೆ. ಈಗ ಜಿಲ್ಲಾಧಿಕಾರಿಯಾಗಿ ನಿನ್ನ ಎದುರಿಗೆ ನಿಂತಿದ್ದೇನೆ.” ಇದಾದ ನಂತರ ಆ ಪೋಸ್ಟ್ ರಾಣಿಯವರ ಆತ್ಮಚರಿತ್ರೆಯ ಒಂದು ಭಾಗವನ್ನು ಓದುತ್ತದೆ.
ಈ ಆತ್ಮಚರಿತ್ರೆಯನ್ನು ಹಲವು ವೆಬ್‌ಸೈಟ್‌ಗಳು ರಾಣಿ ಸೊಯಮೊಯಿ ಅವರ ಆತ್ಮಚರಿತ್ರೆಯೆಂದೇ ಪ್ರಕಟಿಸಿದವು. ಆ ವೆಬ್‌ಸೈಟ್‌ಗಳಲ್ಲಿಯೂ ರಾಣಿಯವರ ಪೋಷಕರು ಮೈಕಾ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು, ರಾಣಿ ಐದು ವರ್ಷದವರಿದ್ದಾಗಲೇ ದುಡಿಯುತ್ತಿದ್ದರು ಎಂದು, ಆಕೆಯ ಕುಟುಂಬದಲ್ಲಿ ಹಲವು ಜೀವ ಹಾನಿಯಾಯಿತೆಂದು ಮತ್ತು ರಾಣಿ ನಂತರದಲ್ಲಿ ಒಂದು ಅನಾಥಾಶ್ರಮಕ್ಕೆ ಸೇರಬೇಕಾಯಿತು ಎಂಬ ವಿವರಗಳಿದ್ದವು.
ವಾಸ್ತವ ಪರಿಶೀಲನೆ:
ಈ ಕುರಿತು ಹಲವು ಸಾಮಾಜಿಕ ಮಾಧ್ಯಮಗಳು ವಾಸ್ತವಾಂಶವನ್ನು ತಿಳಿದುಕೊಳ್ಳಲು ಪ್ರಯತ್ನಿಸಿವೆ. ಮಲಪ್ಪುರಂ ಜಿಲ್ಲೆಯ ಜಿಲ್ಲಾಧಿಕಾರಿಯ ಕುರಿತು ಜಾಲತಾಣಗಳಲ್ಲಿ ಹಾಗೂ ಇತರೆ ಮೂಲಗಳ ಮೂಲಕ ವಿಚಾರಿಸಿದಾಗ ಎಲ್ಲಿಯೂ ರಾಣಿ ಸೊಯಮೊಯಿ ಎಂಬ ಹೆಸರಿನ ಜಿಲ್ಲಾಧಿಕಾರಿಯಿರುವುದೇ ಕಂಡು ಬಂದಿಲ್ಲ. ಈ ಹೆಸರಿನ ಅಧಿಕಾರಿಯ ಯಾವುದೇ ಅಧಿಕೃತ ದಾಖಲೆಯೂ ಲಭಿಸಲಿಲ್ಲ.
ಇನ್ನೂ ಹೆಚ್ಚಿನ ವಿವರಗಳನ್ನು ಹುಡುಕಿದಾಗ, ಟೈಮ್ಸ್ ಆಫ್ ಇಂಡಿಯಾದಲ್ಲಿ ‘ರೀರ್ಸ್ರ ಫೋರಂ’ ಎಂಬ ಹೆಸರಿನ ಒಂದು ಕಾಲಂನಲ್ಲಿ ಈ ಪೋಸ್ಟ್ನ ವಿವರಗಳಿರುವ ಪೋಸ್ಟ್ ವೈರಲ್ ಆಗಿರುವ ಸುದ್ದಿ ಕಂಡು ಬಂತು. ಅಂದರೆ ಈ ಕಥೆ ೨೦೨೦ರಿಂದಲೂ ಸದ್ದು ಮಾಡುತ್ತಿದೆ. ರಾಣಿ ಸೊಯಮೊಯಿಯವರ ಕತೆ, ಮಲಯಾಳಂ ಭಾಷೆಯಲ್ಲಿ ಹಕಿಂಮ್ ಮೊರೆ ಅವರು ಬರೆದಿರುವ ಒಂದು ಚಿಕ್ಕ ಕಥಾಸಂಗ್ರಹದ ಒಂದು ಕಥಾನಾಯಕಿ ಎಂಬ ಅಭಿಪ್ರಾಯಗಳೂ ಸಹ ಕಂಡು ಬಂದಿವೆ.
ಈ ಪುಸ್ತಕವನ್ನು ಹುಡುಕಾಡಿದಾಗ, ನಿಜಕ್ಕೂ ಆ ಚಿಕ್ಕ ಕತೆಗಳಿರುವ ಪುಸ್ತಕದಲ್ಲಿದ್ದಂತಹ ‘ಥ್ರೀ ವುಮೆನ್’ (ಮೂರು ಮಹಿಳೆಯರು) ಎಂಬ ಸರಣಿಕತೆಯಲ್ಲಿ ಈ ಹೆಸರಿರುವುದು ಕಂಡು ಬಂದಿದೆ. ಈ ಕತೆಯ ಹೆಸರು “ಶೈನಿಂಗ್ ಫೇಸಸ್’ (Shining Faces) ಎಂದಾಗಿದ್ದು ಹಕೀಮ್ ಮೊರಯುರ್ ಅವರು ಬರೆದಿದ್ದಾರೆ. ಮೊರೆಯುರ್ ಅವರು ಮಲಪ್ಪುರಂನ ನಿವಾಸಿ . ರಾಣಿ ಸೊಯಮೊಯಿ ಎಂಬ ಹೆಸರು ಇವರ ಕತೆಯ ಪುಸ್ತಕದ ಒಂದು ಕಾಲ್ಪನಿಕ ಪಾತ್ರಧಾರಿಯ ಹೆಸರು! ಹಕೀಮ್ ಮೊರೆಯುರ್ ಅವರು ರಾಣಿ ಸೊಯಮೊಯಿ ಅವರು ಮಲಪ್ಪುರಂನ ಜಿಲ್ಲಾಧಿಕಾರಿ ಎಂಬ ಸುದ್ದಿ ಸುಳ್ಳು ಎಂದು ತಮ್ಮ ಫೇಸ್‌ಬುಕ್‌ನ ಪುಟದಲ್ಲಿ ಬರೆದುಕೊಂಡಿದ್ದಾರೆ.
ಅದರ ಸಾರಾಂಶ ಹೀಗಿದೆ: “ನನ್ನ ಸರಣಿ ಕತೆಗಳಧ ‘ಥ್ರೀ ವುಮೆನ್’ನ ‘ಶೈನಿಂಗ್ ಫೇಸಸ್’ ಎಂಬ ಚುಟುಕು ಕತೆಯ ಸಾರಾಂಶವನ್ನು ಯಾರೋ ಕದ್ದು, ಯಾವುದೊ ಮಹಿಳೆಯ ಚಿತ್ರದೊಂದಿಗೆ ಅಳವಡಿಸಿ ನಿಜ ಕತೆಯೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಇದು ನಾನು ಬರೆದಿರುವಂತಹ ಕೇವಲ ಒಂದು ಸಣ್ಣ ಕತೆ. ಆದರೆ ಅನೇಕರು ನನ್ನ ಕತೆಯ ಪಾತ್ರಧಾರಿ ರಾಣಿ ಸೊಯಮೊಯಿ ನಿಜಕ್ಕೂ ಓರ್ವ ಜಿಲ್ಲಾಧಿಕಾರಿಯಾಗಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಇದಕ್ಕೆ ನಾನು ಜವಾಬ್ದಾರನಲ್ಲ ಎಂಬುದನ್ನು ಎಲ್ಲರು ಗಮನಿಸಬೇಕು. ಇದರಿಂದ ಏನಾದರೂ ಅನಾಹುತಗಳಾದರೆ ನಾನು ಜವಾಬ್ದಾರನಾಗಿರುವುದಿಲ್ಲ. ನಾನು ಬರೆದಿರುವಂತಹ ಒಂದು ಕತೆ ಈ ರೀತಿ ತಪ್ಪಾಗಿ ಬಳಕೆಯಾಗಿರುವುದನ್ನು ನೋಡಿದರೆ ನನಗೆ ಬಹಳ ನೋವಾಗುತ್ತದೆ,” ಎಂದು ಬರೆದುಕೊಂಡಿದ್ದಾರೆ.

ಸುದ್ದಿ ಮೂಲ: Newsmeter

 

key words: DC-Rani Soyamoyi-kerala