ದೇವನಗರಿ ದಾವಣಗೆರೆಯಲ್ಲಿ TV5 ಕನ್ನಡ  ವತಿಯಿಂದ ಇದೇ ಮೊದಲ ಬಾರಿಗೆ ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವ…

kannada t-shirts

ದಾವಣಗೆರೆ,ನ,23,2019(www.justkannada.in):  ದೇವನಗರಿ, ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆಯಲ್ಲಿ ಟಿವಿ5 ಕನ್ನಡ ಸುದ್ದಿ ವಾಹಿನಿ ಇದೇ ಮೊಟ್ಟ ಮೊದಲ ಬಾರಿಗೆ ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.

ಇದೇ ನವೆಂಬರ್​ 24, 2019ರ ಭಾನುವಾರ, ಸಂಜೆ 5 ಗಂಟೆಯಿಂದ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಶ್ರೀ ಶಿವಪಾರ್ವತಿ ಕಲ್ಯಾಣೋತ್ಸವ ನಡೆಯಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಡೀ ದಾವಣಗೆರೆ ಸಿಂಗಾರಗೊಂಡಿದೆ. ಅಲ್ಲದೆ, ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಕೈಲಾಸ ಪರ್ವತ ಸೆಟ್​​ ಹಾಕಲಾಗಿದೆ. ಸುಮಾರು 50 ಸಾವಿರ ಭಕ್ತರು ಸೇರುವ ನೀರಿಕ್ಷೆ ಇದೆ.

ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವಕ್ಕೆ ವಿವಿಧ ಮಠಾಧೀಶರು ಆಗಮಿಸಿಲಿದ್ದಾರೆ. ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದು ಪವಿತ್ರ ಕಾರ್ತಿಕ ಮಾಸಶಿವರಾತ್ರಿಯ ಪರ್ವದಿನದ ಶುಭ ವೇಳೆ. ಭಕ್ತಕೋಟಿ ಸಮ್ಮುಖದಲ್ಲಿ ಲೋಕನಾಥನನ್ನ ಸ್ಮರಿಸುವ ಆ ಅದ್ಭುತ ಕ್ಷಣಗಳಿಗೆ  ಸಾಕ್ಷಿಯಾಗಲಿದೆ.

ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವದಲ್ಲಿ ಶ್ರೀಮದ್​ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ, ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ  ಭಗವತ್ಪಾದ ಮಹಾಸ್ವಾಮೀಗಳು, ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಸ್ವಾಮಿಗಳು, ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಈ ನಾಲ್ವರು ಸ್ವಾಮೀಜಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸ್ವಾಮೀಜಿಗಳ ಆಶೀರ್ವಚನ ಇರಲಿದೆ.

ಶಿವಪಾರ್ವತಿ ಪ್ರತಿಷ್ಠಾಪನೆ….

ಅಂದು ಸಂಜೆ ಹೈಸ್ಕೂಲ್ ಮೈದಾನದಲ್ಲಿ ಕಲ್ಯಾಣೋತ್ಸವಕ್ಕೂ ಮುನ್ನ, ನಗರದ ಲಕ್ಷ್ಮೀ ಫ್ಲೋರ್​ಮಿಲ್​ ಬಳಿ ಇರುವ ಗಣೇಶ್ ದೇವಸ್ಥಾನದ ಬಳಿ ಶಿವ ಪಾರ್ವತಿಯರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆ ನಡೆಯಲಿದೆ. ಪೂಜೆ ಬಳಿಕ ಶಿವ ಪಾರ್ವತಿಯರ ಮೂರ್ತಿಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ಶೋಭಾಯಾತ್ರೆ…

ಶ್ರೀ ಶಿವಪಾರ್ವತಿ ಕಲ್ಯಾಣಕ್ಕೂ ಮುನ್ನ ಅತ್ಯಾದ್ಭುತ, ಮನಮೋಹಕ, ರೋಚಕವಾಗಿ ಶಿವ ಪಾರ್ವತಿಯರ ಶೋಭಾಯಾತ್ರೆ ನಡೆಯಲಿದೆ.. ತಾಳ-ಮೇಳ, ಮಂಗಳವಾದ್ಯ, ವೇದ ಮಂತ್ರಗಳ ಮಧ್ಯೆ ಶೋಭಾಯಾತ್ರೆ ನಡೆಯಲಿದೆ. ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಶಿವ ಪಾರ್ವತಿಯ ವಿಗ್ರಹಗಳ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳು ಇದರಲ್ಲಿ ಭಾಗಿಯಾಗಲಿವೆ. ಅಘೋರ ನೃತ್ಯ, ಶಿವತಾಂಡವಜ, ದೊಳ್ಳು ಕುಣಿತ, ನಂದಿ ಧ್ವಜ ಮಧ್ಯೆ ಶಿವ-ಪಾರ್ವತಿ ಮೆರವಣಿಗೆ ನಡೆಯಲಿದೆ. ಶಿವ ಪಾರ್ವತಿ ಕಲ್ಯಾಣೋತ್ಸವದ ಬಳಿಕ, ಒಂಭತ್ತು ವಿಧಧ ವಿಶೇಷ ದ್ರವ್ಯಗಳನ್ನು ಒಳಗೊಂಡ ಮಹಾ ಪ್ರಸಾದವನ್ನು ಉಚಿತವಾಗಿ ವಿತರಿಸಲಾಗುತ್ತದೆ

ಶ್ರೀ ಕಾಶಿ ವಿಶ್ವನಾಥನ ಸನ್ನಿಧಿಯ ಅಮೃತ ಸಮಾನ ಪವಿತ್ರ ಗಂಗಾಜಲ, ನೇಪಾಳದ ಪಶುಪತಿನಾಥ ದೇಗುಲದ ವಿಶೇಷ ಶಕ್ತಿಯ ರುದ್ರಾಕ್ಷಿ, ಶಿವನ ಆತ್ಮಲಿಂಗ ಗೋಕರ್ಣದ ಮಹಾಬಲೇಶ್ವರ ದೇಗುಲದ ಲಾಡು, ರಾಮಚಂದ್ರಾಪುರ ಸಂಸ್ಥಾನದ ಮಂತ್ರಾಕ್ಷತೆ, ದೇವತಾ ಸ್ತ್ರೋತ್ರಗಳನ್ನ ಒಳಗೊಂಡ ಪುಸ್ತಕ, ಅರಿಶಿನ ಕುಂಕುಮ, ವಿಭೂತಿ ಸೇರಿ 9 ರೀತಿಯ ವಿಶೇಷ ಮಹಾ ಪ್ರಸಾದವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಇತರೆ ಗಣ್ಯರು..

ಕಾರ್ಯಕ್ರಮದಲ್ಲಿ ಡಿಸಿಎಂಗಳಾದ  ಲಕ್ಷ್ಮಣ ಸವದಿ, ಡಾ. ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ದಾವಣಗೆರೆ ಉಸ್ತುವಾರಿ ಸಚಿವರಾದ. ಕೆ.ಎಸ್​. ಈಶ್ವರಪ್ಪ, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಸಿಸಿ ಪಾಟೀಲ್, ವಿ.ಸೋಮಣ್ಣ, ಪ್ರಭು ಚವ್ಹಾಣ್, ಕೋಟ ಶ್ರೀನಿವಾಸ ಪೂಜಾರಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಕೆಎಂಎಫ್​ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ದಾವಣಗೆರೆ ಸಂಸದರಾದ ಜಿ.ಎಂ. ಸಿದ್ದೇಶ್ವರ್​, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಶಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾದ ಎಸ್​.ಎ. ರವೀಂದ್ರನಾಥ್, ಮಾಜಿ ಸಚಿವರಾದ ಈಶ್ವರ್​ ಖಂಡ್ರೆ, ಎಚ್​.ಕೆ. ಪಾಟೀಲ್​, ಮುರುಗೇಶ್ ನಿರಾಣಿ, ಎಂಬಿ.ಪಾಟೀಲ್​ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಬರಲಿದ್ದಾರೆ.

Key words: davanagere- Shri Sivaparvati Kalyana -TV5 Kannada.

website developers in mysore