ದೇವಸ್ಥಾನಕ್ಕೆ ಭಕ್ತರ ಪ್ರವೇಶ: ದಸರಾ ಸಂದರ್ಭದಲ್ಲೂ ಇದೇ ಕೊರೋನಾ ಮಾರ್ಗಸೂಚಿ ಅನ್ವಯ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ

kannada t-shirts

ಮೈಸೂರು,ಅಕ್ಟೋಬರ್,10,2020(www.justkannada.in) : ಪ್ರಸ್ತುತ ಕೊರೊನಾ ಮಾರ್ಗಸೂಚಿಗಳ ಪ್ರಕಾರ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಡಿತಿದೆ. ದಸರಾ ಸಂದರ್ಭದಲ್ಲೂ 10ದಿನಗಳ ಕಾಲ ಇದೇ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಮುಜಾರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.jk-logo-justkannada-logoದಸರಾ ಮಹೋತ್ಸವ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಜಾ ದಿನಗಳು ಶುಕ್ರವಾರಗಳಂದು ಭಕ್ತರು ಹೆಚ್ಚಾಗುವ ಕಾರಣಕ್ಕೆ ನಿರ್ಬಂಧ ವಿಧಿಸುಲಾಗುತ್ತಿದೆ. ಈ ವಿಚಾರ ಇಂದೂ ಕೂಡಾ ಚರ್ಚೆಗೆ ಬಂತು. ದಸರಾ ಸಂಧರ್ಭದಲ್ಲಿ ಜನ ಹೆಚ್ಚಾಗುವ ಕಾರಣಕ್ಕೆ ನಿರ್ಬಂಧ ಹಾಕುವ ಬಗ್ಗೆ ಮುಂದೆ ತೀರ್ಮಾನ ಮಾಡಲಾಗುವುದು ಎಂದರು.

ಮುಕ್ತವಾಗಿ ಚರ್ಚೆಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಿ ಸಾ.ರಾ.ಗೆ ಶ್ರೀನಿವಾಸ್ ಪೂಜಾರಿ ಸಲಹೆ

ತಿರುಪತಿಯಲ್ಲಿ ಕರ್ನಾಟಕ ಭವನ ಉನ್ನತೀಕರಣ ವಿಚಾರ. ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ತೊಂದರೆಗಳಾಗುತ್ತಿರುವ ಬಗ್ಗೆ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಎರಡರಲ್ಲೂ ಕೂಡ ಕರ್ನಾಟಕದ ಭಕ್ತರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚೆಯಾಗುತ್ತಿತ್ತು.

ತಿರುಪತಿಯಲ್ಲಿ 200ಕೋಟಿಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅನಿವಾರ್ಯವಾಗಿ ಅಲ್ಲಿನ ಸಂಸ್ಥೆಗಳ ಮೂಲಕ ಕಾಮಗಾರಿ ಮಾಡಿಸಲಾಗುತ್ತಿದೆ. ಸಾ.ರಾ.ಮಹೇಶ್ ಅವರಿಗೆ ಯಾವುದೇ ಅನುಮಾನವಿದ್ದಲ್ಲಿ ಮುಕ್ತವಾಗಿ ಚರ್ಚೆಮಾಡಿ ಬಗೆಹರಿಸಿಕೊಳ್ಳಲಿ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

key words : Dasara-10-Days-Corona-Roadmap-Applicable-Minister-Kota Srinivasa Poojary

website developers in mysore